2 ಕಾರುಗಳು ಪಲ್ಟಿ: 4 ಮಂದಿಗೆ ಗಾಯ

ಉಪ್ಪಳ: ಕಾರುಗಳೆರಡು ಪಲ್ಟಿಯಾಗಿ ಸಂಭವಿಸಿದ ಅಪಘಾತದಲ್ಲಿ ನಾಲ್ಕು ಮಂದಿ ಗಾಯಗೊಂಡಿದ್ದಾರೆ. ಮಣ್ಣಂಗುಳಿ ಪರಿಸರ ನಿವಾಸಿಗಳಾದ ಶಾಹಿಲ್ (22), ಮನಾಫ್ (19), ಫಹಾಲ್ (19), ರಾಶಿದ್ (25) ಗಾಯಗೊಂಡವರು. ನಿನ್ನೆ ಸಂಜೆ 4 ಗಂಟೆ ವೇಳೆ ಮಣ್ಣಂಗುಳಿ ಪರಿಸರದಲ್ಲಿ ಅಪಘಾತ ಸಂಭವಿಸಿದೆ. ಈ ನಾಲ್ಕು ಮಂದಿ ಎರಡು ಕಾರುಗಳಲ್ಲಾಗಿ ಬಾಯಾರು ಭಾಗದತ್ತ ತೆರಳುತ್ತಿರುವಾಗ ಮಣ್ಣಂಗುಳಿ ಇಳಿಜಾರಿನಲ್ಲಿ ಕಾರೊಂದನ್ನು ರಸ್ತೆ ಬದಿಗೆ ಚಲಾಯಿಸುತ್ತಿದ್ದಂತೆ ಹಿಂದಿನಿಂದ ಆಗಮಿಸುತ್ತಿದ್ದ ಈ ತಂಡದ ಇನ್ನೊಂದು ಕಾರು ಢಿಕ್ಕಿ ಹೊಡೆದಿದೆ. ಈ ವೇಳೆ ಎರಡೂ ಕಾರುಗಳು ಪಲ್ಟಿಯಾಗಿದ್ದು, ಅದರಲ್ಲಿದ್ದ ನಾಲ್ಕು ಮಂದಿಗೆ ಗಾಯವುಂಟಾಗಿದೆ. ಇವರನ್ನು ಕೂಡಲೇ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ.

You cannot copy contents of this page