ಪ್ರಧಾನಮಂತ್ರಿ ಭೇಟಿಗಾಗಿ ಮಧೂರು, ಬದಿಯಡ್ಕ ಪಂ. ಅಧ್ಯಕ್ಷರು ದೆಹಲಿಗೆ

ಕಾಸರಗೋಡು: ಪ್ರಧಾನಮಂತ್ರಿ ನರೇಂದ್ರಮೋದಿ ನೀಡಿದ ಆಹ್ವಾನದಂತೆ  ಮಧೂರು  ಹಾಗೂ ಬದಿಯಡ್ಕ ಪಂಚಾಯತ್‌ಗಳ ಅಧ್ಯಕ್ಷರು  ಸಹಿತ ಹಲವರು ಬಿಜೆಪಿ ನೇತಾರರು ಇಂದು ದೆಹಲಿಗೆ ತೆರಳಿದ್ದಾರೆ.  ಬದಿಯಡ್ಕ ಪಂಚಾಯತ್ ಅಧ್ಯಕ್ಷ ಡಿ. ಶಂಕರ, ಮಧೂರು ಪಂಚಾಯತ್ ಅಧ್ಯಕ್ಷೆ ಸುಜ್ಞಾನಿ ಶ್ಯಾನುಭೋಗ್, ಮೀಂಜ ಪಂಚಾಯತ್ ಸದಸ್ಯೆ ಆಶಾಲತಾ ಸಹಿತ ಹಲವರು ದೆಹಲಿಗೆ ತೆರಳಿದರು.

 ದೆಹಲಿಯಲ್ಲಿ ಪ್ರಧಾನಮಂತ್ರಿ ಯೊಂದಿಗೆ ಇವರು ಮುಖಾಮುಖಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈ ವೇಳೆ  ತಮ್ಮ ಪಂಚಾಯತ್‌ಗಳಲ್ಲಿ ನಡೆಯಬೇಕಾದ ಅಭಿವೃದ್ಧಿ ಯೋಜನೆಗಳ ವರದಿಯನ್ನು  ಪ್ರಧಾನಮಂತ್ರಿಗೆ ಇವರು ಸಲ್ಲಿಸಲಿದ್ದಾರೆ.

RELATED NEWS

You cannot copy contents of this page