ಮಾನ್ಯ: ಕೊಲ್ಲಂಗಾನ ಸಂತ ಥೋಮಸ್ ಚರ್ಚ್ನಲ್ಲಿ ಉಚಿತ ಕ್ಯಾನ್ಸರ್ ಜಾಗೃತಿ ಮತ್ತು ತಪಾಸಣಾ ಶಿಬಿರ ನಡೆಸಲಾಯಿತು. ಮಂಗಳೂರಿನ ಫಾದರ್ ಮುಲ್ಲರ್ಸ್ ಮೆಡಿಕಲ್ ಕಾಲೇಜು, ಇಂಡ್ಯನ್ ಕ್ಯಾನ್ಸರ್ ಸೊಸೈಟಿ ಸಹಕಾರದೊಂದಿಗೆ ನಡೆದ ಶಿಬಿರದಲ್ಲಿ ಹಲವು ಮಂದಿ ಭಾಗವಹಿಸಿ ಆರೋಗ್ಯ ತಪಾಸಣೆ ನಡೆಸಿದರು. ಡಾ| ಕುಮಾರ್ ಎಸ್. ವಶಿಷ್ಠ, ಡಾ| ಆಯಿಷಾ ರೋಗಿಗಳ ತಪಾಸಣೆ ನಡೆಸಿದರು. ವಿಷ್ಣುಪ್ರಸಾದ್ ಐ, ಆಸ್ಪತ್ರೆಯ ಸಿಬ್ಬಂದಿವರ್ಗದವರು ಉಪ ಸ್ಥಿತರಿದ್ದರು. ಫಾ| ರಿತೇಶ್ ಎ.ಎಲ್. ರೋಡ್ರಿಗಸ್ ಮಾತನಾಡಿದರು.







