ಕಾಸರಗೋಡು: ಕೇರಳದ ಉತ್ತರ ಭಾಗದಲ್ಲಿ ಜನಸಂದಣಿಯ ಹಾಲ್ಗಡಲು ಸೃಷ್ಟಿಸಿ ಸಮಸ್ತ ಕೇರಳ ಜಂಇಯತ್ತುಲ್ ಉಲಮ ಸಂಘಟನೆಯ ಶಕ್ತಿ ಹಾಗೂ ಸಾಮರ್ಥ್ಯವನ್ನು ಕೇರಳದ ಜನತೆಗೆ ದೃಢೀಕರಿಸಿದೆ. ೫ ದಿನಗಳಲ್ಲಾಗಿ ನಡೆದ ಶತಮಾನೋತ್ಸವ ಸಂಭ್ರಮ ಕಾರ್ಯಕ್ರಮದ ಸಮಾರೋಪ ಆದಿತ್ಯವಾರ ನಡೆಯಿತು.
ಆದಿತ್ಯವಾರ ಸಂಜೆ 4 ಗಂಟೆಯ ಬಳಿಕ ಆರಂಭಗೊಂಡ ಸಾರ್ವಜನಿಕ ಸಮ್ಮೇಳನ ಸೂರ್ಯಾಸ್ತವರೆಗೆ ಮುಂದುವರಿಯಿತು. ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಙಳ್, ಪಾಣಕ್ಕಾಡ್ ಸಾದಿಖಲಿ ಶಿಹಾಬ್ ತಂಙಳ್, ಮುಖ್ಯಮಂತ್ರಿ ಪಿಣರಾಯಿ ವಿಜಯನ್, ವಿಪಕ್ಷ ಮುಖಂಡ ವಿ.ಡಿ. ಸತೀಶನ್, ಕರ್ನಾಟಕ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಎಂ.ಎ. ಯೂಸಫಲಿ, ಸಮಸ್ತ ಕಾರ್ಯದರ್ಶಿ ಎಂ.ಟಿ. ಅಬ್ದುಲ್ಲ ಮುಸ್ಲಿಯಾರ್, ಕೋಶಾಧಿಕಾರಿ ಪಿ.ಪಿ. ಉಮ್ಮರ್ ಮುಸ್ಲಿಯಾರ್ ಕೊಯ್ಯೋಡ್, ಪಿ.ಕೆ. ಕುಂಞಾಲಿಕುಟ್ಟಿ, ಪಿ.ಎಂ. ಅಬ್ದುಸಲಾಂ ಬಾಖವಿ ವಡಕ್ಕೆಕ್ಕಾಡ್, ಅಬ್ದುಲ್ ಹಮೀದ್, ಶಾಸಕರು ಸಹಿತ ಹಲವು ಗಣ್ಯರು ಭಾಗವಹಿಸಿದರು.
ಕೇರಳದ ಮುಸ್ಲಿಂ ಸಮುದಾಯದ ವಿಶ್ವಾಸ ವಿಷಯಗಳನ್ನು ಅಧಿಕೃತವಾಗಿ ತೀರ್ಮಾ ನಿಸಬೇಕಾಗಿರುವುದು ಸಮಸ್ತ ಜಂಇಯತ್ತುಲ್ ಉಲಮವಾಗಿದೆ ಎಂದು ಅಧ್ಯಕ್ಷ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಙಳ್ ಭಾಷಣದಲ್ಲಿ ತಿಳಿಸಿದರು.






