ನೀರು ದುರುಪಯೋಗಪಡಿಸದಂತೆ ತಿಳಿಸಿದ ಗೃಹಿಣಿಗೆ ನೆರೆಮನೆ ನಿವಾಸಿಗಳಿಂದ ಹಲ್ಲೆ

ಕುಂಬಳೆ: ಕುಡಿಯುವ ನೀರು ದುರುಪಯೋಗಪಡಿಸಬೇಡಿ ಎಂದು ಬುದ್ಧ್ದಿಮಾತು ಹೇಳಿದ ಗೃಹಿಣಿ ಹಾಗೂ ಅವರ ಮಗಳಿಗೆ ನೆರೆಮನೆ ನಿವಾಸಿಗಳಾದ ಮೂರು ಮಂದಿ ಹಲ್ಲೆಗೈದ ಬಗ್ಗೆ ದೂರಲಾಗಿದೆ.

ಪೈವಳಿಕೆ ಆಜಾದ್‌ನಗರದ ದಿ| ಐತ್ತ ಎಂಬವರ ಪತ್ನಿ  ಶಾರದ (60) ಹಾಗೂ ಪುತ್ರಿ ಶ್ರೀಜರಿಗೆ ಹಲ್ಲೆಗೈದಿದ್ದು,  ಈ  ಪೈಕಿ ಶಾರದರನ್ನು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ  ದಾಖಲಿಸಲಾಗಿದೆ.

ನೆರೆ ಮನೆ ನಿವಾಸಿಗಳಾದ ಲೀಲ, ಚಂದ್ರ,ಸಜನ್ ಎಂಬಿವರು ಸೇರಿ ಹಲ್ಲೆಗೈದಿರುವುದಾಗಿ ಗಾಯಾಳುಗಳು ಆರೋಪಿಸಿದ್ದಾರೆ.  ನಿನ್ನೆ ಸಂಜೆ ಈ ಘಟನೆ ನಡೆದಿದೆ. ಪೈವಳಿಕೆ ಆಜಾದ್‌ನಗರದಲ್ಲಿ ಕುಡಿಯುವ ನೀರಿನ ಟ್ಯಾಂಕ್ ಇದ್ದು ಅಧರಿಂದ ಶಾರದ ಹಾಗೂ ನೆರೆಮನೆ ನಿವಾಸಿಗಳೂ ನೀರು ಉಪಯೋಗಿಸುತ್ತಿದ್ದಾರೆ. ನಿನ್ನೆ ಸಂಜೆ ನೆರೆಮನೆ ನಿವಾಸಿಗಳಲ್ಲಿ ನೀರು  ಅಪರಿಮಿತವಾಗಿ ಬಳಸಕೂ ಡದೆಂದೂ, ದುರುಪಯೋಗ ಪಡಿಸಿದಲ್ಲಿ ತಮಗೆ ನೀರಿಲ್ಲದಾಗಲಿ ದೆಯೆಂದು ಶಾರದ ತಿಳಿಸಿದ್ದರೆನ್ನಲಾ ಗುತ್ತಿದೆ. ಇದರಿಂದ ದ್ವೇಷಗೊಂಡ ಲೀಲ,ಚಂದ್ರ ಹಾಗೂ  ಸಜನ್ ಸೇರಿ ಶಾರದರಿಗೆ ಹಲ್ಲೆಗೈದಿದ್ದಾರೆ. ತಾಯಿಗೆ ಹಲ್ಲೆಗೈಯ್ಯುತ್ತಿರುವುದನ್ನು ಪುತ್ರಿ ಶ್ರೀ ತಡೆದಿದ್ದು, ಈ ವೇಳೆ ಆಕೆಗೂ ತಂಡ ಹಲ್ಲೆಗೈದುದಾಗಿ ದೂರಲಾಗಿದೆ. ಹಲ್ಲೆಯಿಂದ ತೀವ್ರ ಗಾಯಗೊಂಡು  ಅಸ್ವಸ್ಥರಾದ ಶಾರದಾರನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

RELATED NEWS

You cannot copy contents of this page