ಸೋಶ್ಯಲ್ ಮೀಡಿಯಾ ಇನ್‌ಫ್ಲುವನ್ಸರ್ ಚಿನ್ನುಪಾಪು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ: ಅಭಿಮಾನಿಗಳಲ್ಲಿ ಮಡುಗಟ್ಟಿದ ದುಃಖ ; ಪೊಲೀಸ್ ತನಿಖೆ ಆರಂಭ

ಕಾಸರಗೋಡು: ಸೋಶ್ಯಲ್ ಮೀಡಿಯಾ ಇನ್‌ಫ್ಲುವೆನ್ಸರ್ ಆಗಿದ್ದ ಚಿನ್ನು ಪಾಪು ಯಾನೆ ಕೆ. ರೇಷ್ಮ (25)ರ ಅಕಾಲಿಕ ಅಗಲುವಿಕೆ ಯಿಂದ ಆಕೆಯ ಸಂಬಂಧಿಕರು, ಅಭಿಮಾನಿ ಗಳು ಹಾಗೂ ಹಿಂಬಾಲಕರಲ್ಲಿ ತೀವ್ರ ಶೋಕಸಾಗರ ಸೃಷ್ಟಿಯಾಗಿದೆ.

ನಿನ್ನೆ ಮಧ್ಯಾಹ್ನ 2 ಗಂಟೆ ವೇಳೆ ಕಾಸರಗೋಡು ಆಜಾದ್‌ನಗರದ ಬಾಡಿಗೆ ಕ್ವಾರ್ಟರ್ಸ್‌ನಲ್ಲಿ ಚಿನ್ನುಪಾಪು ಯಾನೆ ರೇಷ್ಮ ನೇಣುಬಿಗಿದು ಸಾವಿ ಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಬಾಡಿಗೆ ಮನೆಯ ಬಾಗಿಲು ತೆರೆದಿಟ್ಟ ಸ್ಥಿತಿಯಲ್ಲಿತ್ತೆಂದು ಹೇಳಲಾಗುತ್ತಿದೆ. ಇದೇ ವೇಳೆ ರೇಷ್ಮಾರ ಸ್ನೇಹಿತ ಮಧೂರು ನಿವಾಸಿ ಸಂದೇಶ್ ತಲುಪಿ ಆಕೆಯನ್ನು ಆಸ್ಪತ್ರೆಗೆ ತಲುಪಿಸಿರುವು ದಾಗಿಯೂ ಹೇಳಲಾಗುತ್ತಿದೆ. ವಿಷಯ ತಿಳಿದು ರೇಷ್ಮಾರ ತಂದೆ ಆದೂರು ಆಲಂತ್ತಡ್ಕದ ಗಂಗಾಧರ ಹಾಗೂ ಸಹೋದರ ರತೀಶ್ ಆಸ್ಪತ್ರೆಗೆ ತಲುಪಿದ್ದಾರೆ. ಅಲ್ಲದೆ ಸಾವಿನಲ್ಲಿ ಅವರು ಸಂಶಯ ವ್ಯಕ್ತಪಡಿಸಿ ಪೊಲೀಸರಿಗೆ  ದೂರು ನೀಡಿದ್ದಾರೆ.  ರೇಷ್ಮಾರ ಮೃತದೇಹದ ಮರಣೋತ್ತರ ಪರೀಕ್ಷೆ ಇಂದು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ನಡೆಯಲಿದೆ.  ಸಾವಿನ ಬಗ್ಗೆ ಸಂಬಂಧಿಕರು ಸಂಶಯ ವ್ಯಕ್ತ ಪಡಿಸಿದ ಹಿನ್ನೆಲೆಯಲ್ಲಿ ಮೃತದೇಹವನ್ನು  ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲು  ಪೊಲೀಸರು ಆಲೋಚಿಸಿ ದ್ದರು. ಆದರೆ ಕಾಸರಗೋಡಿನಲ್ಲಿ ಫಾರೆನ್ಸಿಕ್ ಸರ್ಜನ್ ಇರುವುದರಿಂದ ಮೃತದೇಹವನ್ನು ಪರಿಯಾರಂಗೆ ಕೊಂಡೊಯ್ಯಬೇಕಾಗಿಲ್ಲವೆಂದು ನಿರ್ಧರಿಸಲಾಯಿತು.

 ರೇಷ್ಮ ತನ್ನ ೧೮ನೇ ವಯಸ್ಸಿ ನಿಂದಲೇ ಸೋಶ್ಯಲ್ ಮೀಡಿಯಾ  ರಂಗದಲ್ಲಿ ಸಕ್ರಿಯರಾಗಿದ್ದರು.  ಕಾಸರಗೋಡಿನ  ವಿವಿಧ ಭಾಗಗಳ  ಭಾಷೆ, ಗ್ರಾಮೀಣ ಶೈಲಿಯ  ಆಹಾರ ತಯಾರಿ, ಸಂಚಾರ ವಿಶೇಷತೆಗಳನ್ನು  ರೇಷ್ಮ ತನ್ನ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಮಾಡುತ್ತಿದ್ದರು.  ಕನ್ನಡ, ಮಲೆ ಯಾಳ, ತುಳು, ಕೊಂಕಣಿ ಮೊದಲಾದ ಭಾಷೆಗಳಲ್ಲಿ ಇವರು ತಮ್ಮ ವೀಡಿಯೋ ಗಳನ್ನು ಪ್ರದರ್ಶಿ ಸುತ್ತಿದ್ದು ಇದು ಅವರ ಅಭಿಮಾನಿಗಳು ಹಾಗೂ ಹಿಂಬಾಲ ಕರನ್ನು ಭಾರೀ ಆಕರ್ಷಿಸಿತ್ತು.  ರೇಷ್ಮರಿಗೆ ಎರಡು ಲಕ್ಷಕ್ಕೂ ಹೆಚ್ಚು ಮಂದಿ ಹಿಂಬಾ ಲಕರಿದ್ದಾರೆ. ಸಾಮಾಜಿಕ ಜಾಲತಾಣಗಳ ಜೊತೆಗೆ  ಧಾರಾವಾಹಿಗಳಲ್ಲೂ ರೇಷ್ಮ ಅಭಿನಯಿಸಿದ್ದಾರೆ. 5 ವರ್ಷಗಳ ಹಿಂದೆ  ಪ್ರಜ್ವಲ್ ಎಂಬಾತನನ್ನು ರೇಷ್ಮ ಮದುವೆಯಾಗಿದ್ದರು. ಇದು ಪ್ರೇಮ ವಿವಾಹವಾಗಿತ್ತೆನ್ನಲಾಗಿದೆ. ಈಮಧ್ಯೆ ದಾಂಪತ್ಯದಲ್ಲಿ ಉಂಟಾದ ಭಿನ್ನಾಭಿಪ್ರಾ ಯಗಳ ಕಾರಣ ಇತ್ತೀಚೆಗೆ ಅವರು ದಾಂಪತ್ಯ ಸಂಬಂಧವನ್ನು ಕಾನೂನು ರೀತಿಯಲ್ಲಿ ವಿಚ್ಛೇಧಿಸಿದ್ದರೆನ್ನಲಾಗಿದೆ.  ಈ ಸಂಬಂಧದಲ್ಲಿ  ೪ ವರ್ಷ ಪ್ರಾಯದ ಬಿಹಾನ್ ಎಂಬ ಪುತ್ರನಿದ್ದಾನೆ.

ವೀಡಿಯೋ ಚಿತ್ರೀಕರಣಕ್ಕೆ ಸಂಬಂಧಿಸಿ  ಪ್ರಯಾಣಿಸಬೇಕಾಗಿ  ಬಂದಾಗ ಮಗನನ್ನು ಆದೂರು ಆಲಂತಡ್ಕದ ಮನೆಯಲ್ಲಿ ಬಿಟ್ಟು ರೇಷ್ಮ ಹೋಗುತ್ತಿದ್ದರು. ಈಮಧ್ಯೆ ಮಧೂರು ನಿವಾಸಿಯೂ, ಪೈಂಟಿಂಗ್‌ನಲ್ಲಿ ನುರಿತನಾದ ಸಂದೇಶ್‌ರೊಂದಿಗೆ  ರೇಷ್ಮ ಸ್ನೇಹದಲ್ಲಿದ್ದರೆನ್ನಲಾಗಿದೆ.  ನಿನ್ನೆ ಮಧ್ಯಾಹ್ನ ಸಂದೇಶ್ ಹಲವು ಬಾರಿ ರೇಷ್ಮರಿಗೆ ಫೋನ್ ಕರೆ ಮಾಡಿದರೂ ಕರೆ ಸ್ವೀಕರಿಸಿರಲಿಲ್ಲವೆನ್ನಲಾಗಿದೆ. ಇದರಿಂದ ಅವರು ಆಜಾದ್‌ನಗರದ ಬಾಡಿಗೆ ಕ್ವಾರ್ಟರ್ಸ್‌ಗೆ ತಲುಪಿದಾಗ ರೇಷ್ಮ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದರೆನ್ನಲಾಗಿದೆ.

ಮರಣೋತ್ತರ ಪರೀಕ್ಷಾ ವರದಿ ಲಭಿಸಿದ ಬಳಿಕವೇ ಸಾವಿಗೆ ಕಾರಣ ವೇನೆಂದು ಸ್ಪಷ್ಟಗೊಳ್ಳಲಿದೆಯೆಂದು ಪೊಲೀಸರು ತಿಳಿಸಿದ್ದಾರೆ. ಇದೇ ವೇಳೆ  ಸಂದೇಶ್‌ರಿಂದ ಪೊಲೀಸರು ಹೇಳಿಕೆ ದಾಖಲಿಸಿಕೊಳ್ಳುವುದಾಗಿ ತಿಳಿದುಬಂದಿದೆ.

ಗಂಗಾಧರ-ಶೈಲಜ ದಂಪತಿಯ ಪುತ್ರಿಯಾದ ರೇಷ್ಮ, ಪುತ್ರ ಬಿಹಾನ್, ಸಹೋದರರಾದ ರತೀಶ್, ರಂಜಿತ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page