ಕೋಟೆಕಣಿ ಕೂಡುರಸ್ತೆಯಲ್ಲಿ ಸಾರಿಗೆ ಅಡಚಣೆ ನಿತ್ಯ ಘಟನೆ: ಪ್ರಯಾಣಿಕರಲ್ಲಿ ಆತಂಕ

ಕಾಸರಗೋಡು: ಕರಂದಕ್ಕಾಡ್-ಮಧೂರು ರಸ್ತೆಯಲ್ಲಿ ಸೂರ್ಲು ಬಳಿ ಕೋಟೆಕಣಿಯ ಕೂಡು ರಸ್ತೆಯಲ್ಲಿ ಸಾರಿಗೆ ಅಡಚಣೆ ಎದುರಾಗುತ್ತಿದ್ದು, ಇದು ಕೆಲವೊಮ್ಮೆ ಅಪಘಾತಗಳಿಗೂ ಕಾರಣವಾಗುತ್ತಿದೆ. ಮೀಪುಗುರಿಯಿಂದ ಕಾಸರಗೋಡು ನಗರಕ್ಕೆ ಸಾಗುವ ವಾಹನಗಳಿಗೆ ಕೋಟೆಕಣಿ ಜಂಕ್ಷನ್‌ನ ಎತ್ತರವಾದ ಈ ಪ್ರದೇಶವು ಸಣ್ಣಪುಟ್ಟ ಅಪಘಾತಗಳಿಗೆ ಕಾರಣವಾಗುತ್ತಿದೆ. ಈ ಕೂಡು ರಸ್ತೆಗೆ ತಲುಪುವಷ್ಟರಲ್ಲಿ ವಾಹನಗಳು ದಿಢೀರ್ ನಿಲುಗಡೆಗೊಳಿಸಬೇಕಾಗುತ್ತಿದ್ದು ಈ ವೇಳೆ ಮುಂದಿರುವ ವಾಹಕ್ಕೆ ಹಿಂದಿನಿಂದ ಬರುವ ವಾಹನವು ಢಿಕ್ಕಿಯಾಗುವ ಸಾಧ್ಯತೆ ಹೆಚ್ಚಿದೆ. ಹೊಸ ಬಸ್ ನಿಲ್ದಾಣಕ್ಕೆ ಸಾಗುವ ಈ ಕೋಟೆಕಣಿ ರಸ್ತೆಯ ಅಭಿವೃದ್ಧಿ ಜೊತೆಗೆ ಈ ಕೂಡು ರಸ್ತೆಯಲ್ಲಿ ವಿಭಾಜಕ ಮತ್ತು ಸೂಚನಾ ಫಲಕ ಸ್ಥಾಪಿಸಿದಲ್ಲಿ ಸುಗಮ ಸಂಚಾರಕ್ಕೆ ಪರಿಹಾರ ಕಾಣಬಹುದು ಎಂದು ವಾಹನ ಪ್ರಯಾಣಿಕರ ಸಹಿತ ನಾಗರಿಕರು ಅಭಿಪ್ರಾಯಪಡುತ್ತಿದ್ದಾರೆ.

You cannot copy contents of this page