ಪುಳ್ಕೂರು ಆರೋಗ್ಯಕೇಂದ್ರದಿಂದ ಕೋಪರ್ ಟಿ, ಸ್ಟೆಥೋಸ್ಕೋಪ್ ಕಳವು

ಮಧೂರು: ಪುಳ್ಕೂರು ಆರೋಗ್ಯ ಕೇಂದ್ರದಿಂದ ಕಳವು ನಡೆಸಲಾಗಿದೆ. ಬಾಗಿಲಿನ ಬೀಗ ಮುರಿದು ಒಳನುಗ್ಗಿ ಕೋಪರ್ ಟಿ, ಸ್ಟೆಥೋಸ್ಕೋಪ್, ಇಂಡಕ್ಷನ್ ಕುಕ್ಕರ್ ಮೊದಲಾದ ಸಾಮಗ್ರಿಗಳನ್ನು ಕಳವುಗೈಯ್ಯಲಾಗಿದೆ. ಆರೋಗ್ಯ ಕೇಂದ್ರ ನೌಕರ ಎಸ್.ಎಲ್. ಅಜೀಶ್‌ಖಾನ್ ನೀಡಿದ ದೂರಿನಂತೆ ಕಾಸರಗೋಡು ನಗರಠಾಣೆ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

ಫೆಬ್ರವರಿ 9ರಂದು ರಾತ್ರಿ 8 ಗಂಟೆ ಮತ್ತು ಫೆ. 10ರಂದು ಬೆಳಿಗ್ಗೆ 9 ಗಂಟೆ ಮಧ್ಯೆ ಕಳವು ನಡೆದಿದೆಯೆಂದು ದೂರಿನಲ್ಲಿ ತಿಳಿಸಲಾಗಿದೆ. ಕೋಪರ್ ಟಿ ಹಾಗೂ ಸ್ಟೆಥೋಸ್ಕೋಪ್ ಕಳವು ನಡೆಸಿರುವುದು ಪೊಲೀಸ್ ಹಾಗೂ ಆರೋಗ್ಯ ಇಲಾಖೆ ನೌಕರರಲ್ಲಿ ಆಶ್ಚರ್ಯಕ್ಕೆ ಕಾರಣವಾಗಿದೆ. ಸಾಮಾನ್ಯವಾಗಿ  ಈ ರೀತಿಯ ಸಾಮಗ್ರಿಗಳನ್ನು ಕಳವು ನಡೆಸುವುದರ ಬಗ್ಗೆ ಕೇಳಿಬಂದಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ.

RELATED NEWS

You cannot copy contents of this page