ರಸ್ತೆ ಬದಿ ಬಿದ್ದಿದ್ದ ತ್ಯಾಜ್ಯ ತೆರವುಗೊಳಿಸಿ ಮಾದರಿಯಾದ ನವೋದಯ ಫ್ರೆಂಡ್ಸ್ ಕ್ಲಬ್

ಕುಂಬಳೆ:  ಶಾಂತಿಪಳ್ಳದಿಂದ ಭಾಸ್ಕರ ನಗರ ವರೆಗೆ ರಸ್ತೆ ಬದಿಗಳಲ್ಲಿ  ರಾಶಿ ಬಿದ್ದಿದ್ದ ಪ್ಲಾಸ್ಟಿಕ್ ಸಹಿತ ವಿವಿಧ ತ್ಯಾಜ್ಯಗಳನ್ನು  ಭಾಸ್ಕರನಗರದ ನವೋದಯ ಫ್ರೆಂಡ್ಸ್ ಕ್ಲಬ್ ಕಾರ್ಯ ಕರ್ತರು ತೆರವುಗೊಳಿಸಿ ಶುಚೀಕರಣ ನಡೆಸಿ ಮಾದರಿಯಾಗಿದ್ದಾರೆ. ಶುಚೀ ಕರಣ ಕಾರ್ಯದಲ್ಲಿ ನಾಗರಿಕರೂ ಪಾಲ್ಗೊಂಡರು. ಇದೇ ರೀತಿಯಲ್ಲಿ ನಾಡಿನ ಎಲ್ಲಾ ಕ್ಲಬ್‌ಗಳು  ಶುಚೀ ಕರಣಕ್ಕೆ ಮುಂದಾದರೆ ವಿವಿಧೆಡೆ ಎಸೆಯಲಾದ ತ್ಯಾಜ್ಯಗಳು ಪೂರ್ಣವಾಗಿ ತೆರವುಗೊಂಡು ನಾಡು ನೆಮ್ಮದಿಪಡಲಿ ದೆಯೆಂದು ಕ್ಲಬ್‌ನ ಕಾರ್ಯಕರ್ತರು ತಿಳಿಸಿದ್ದಾರೆ. ಕ್ಲಬ್‌ನ ಕಾರ್ಯಕರ್ತರು ನಡೆಸಿದ ಈ ಮಾದರಿ ಕಾರ್ಯವನ್ನು ಪಂಚಾಯತ್ ಅಧ್ಯಕ್ಷ ವಿ.ಪಿ. ಅಬ್ದುಲ್ ಖಾದರ್ ಹಾಜಿ ಅಭಿನಂದಿಸಿದ್ದಾರೆ.  ಮನೆಗಳು,   ವ್ಯಾಪಾರ ಸಂಸ್ಥೆಗಳ ಪ್ಲಾಸ್ಟಿಕ್ ಮೊದಲಾದ ತ್ಯಾಜ್ಯಗಳು ರಸ್ತೆ ಬದಿಯಲ್ಲಿ ಎಸೆಯಲ್ಪಟ್ಟು ಭಾರೀ ಸಮಸ್ಯೆ ಎದುರಾಗಿತ್ತು. ಈ ಹಿನ್ನೆಲೆಯಲ್ಲಿ ಕ್ಲಬ್‌ನ ಕಾರ್ಯಕರ್ತರು ಶುಚೀಕರಣ ಕಾರ್ಯ ನಡೆಸಿದ್ದಾರೆ. ಅಲ್ಲದೆ ನಾಡನ್ನು ಶುಚಿಯಾಗಿ ಸಂರಕ್ಷಿ ಸಲು ನಾಗರಿಕರು ಮುಂದೆ ಬರಬೇ ಕೆಂದು ವಿನಂತಿಸಿ ಕ್ಲಬ್ ಕಾರ್ಯ ಕರ್ತರು ಪೋಸ್ಟರ್ ಸ್ಥಾಪಿಸಿದ್ದಾರೆ.

RELATED NEWS

You cannot copy contents of this page