ಕಲ್ಲಿಕೋಟೆ: ಸಿಪಿಎಂ ರಾಜ್ಯ ಕಾರ್ಯದರ್ಶಿ ಎಂ.ವಿ. ಗೋವಿಂದನ್ ಮುನ್ನಡೆಸುವ ಪ್ರಚಾರ ಜಾಥಾದ ವೇದಿಕೆಯಲ್ಲಿ ವೃದ್ದರೋರ್ವರು ನಗದು ಕೊಡುಗೆಯಾಗಿ ನೀಡಿದ ಘಟನೆಯಲ್ಲಿ ಟ್ವಿಸ್ಟ್ ಉಂಟಾಗಿದೆ. ಹಣ ನೀಡಿರುವುದು ಮುಖಂಡರ ನಿರ್ದೇಶ ಪ್ರಕಾರವೆಂದು ವೃದ್ದ ಬಹಿರಂಗಪಡಿಸಿದ್ದಾರೆ.
ಫೆಬ್ರವರಿ ೯ರಂದು ಬಾಲುಶ್ಶೇರಿ ಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೊಯ್ದೀನ್ ಎಂಬ ವೃದ್ದರು ವೇದಿಕೆಗೆ ತಲುಪಿ ಇದು ಪಿಂಚಣಿ ಹಣ, ಇದನ್ನು ಪಕ್ಷಕ್ಕೆ ಕೊಡು ಗೆಯಾಗಿ ನೀಡುತ್ತೇನೆ ಎಂದಿದ್ದರು. ಹಣವನ್ನು ಪಡೆದು ಕೊಂಡ ರಾಜ್ಯ ಕಾರ್ಯದರ್ಶಿ ಕೊಡು ಗೆಯನ್ನು ಸ್ವೀಕರಿಸಿ ರುವುದಾಗಿ ಕಲ್ಪಿಸಿಕೊಳ್ಳಿ ಎಂದು ಹಣವನ್ನು ಅವರ ಜೇಬಿಗೆ ಪುನಃ ಹಾಕಿದ್ದರು. ಈ ಘಟನೆ ಸುದ್ಧಿ ಮಾಧ್ಯಮಗಳಲ್ಲಿ ಭಾರೀ ಪ್ರಚಾರ ಪಡೆದಿತ್ತು. ಆ ಬಳಿಕ ಮುಖಂಡರ ನಿರ್ದೇಶ ಪ್ರಕಾರ ಹಣ ನೀಡಿರುವುದಾಗಿ ಮೊಯ್ದೀನ್ ಹೇಳಿಕೆ ನೀಡುವ ವೀಡಿಯೋವೊಂದು ಬಹಿರಂಗಗೊಂ ಡಿತು. ಇದರೊಂದಿಗೆ ಸಿಪಿಎಂ ಮುಖಂಡರು ಮುಖಭಂಗಕ್ಕೀಡಾದರು. ಮುಖಂಡರು ಹೇಳಿದರು- ನೀವು ಈ ಹಣವನ್ನು ಅವರಿಗೆ ನೀಡಿ, ಅವರು ಅದನ್ನು ಹಿಂತಿರುಗಿಸುವರು. ಅದೇ ರೀತಿ ನಾನು ನಡೆದುಕೊಂಡೆ ಎಂದು ಮೊಯ್ದೀನ್ ತಿಳಿಸಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣ ಗಳಲ್ಲಿ ವ್ಯಾಪಕವಾಗಿ ಪ್ರಚಾರದಲ್ಲಿದೆ. ಇಷ್ಟು ಶುದ್ಧ ಮನಸ್ಕನಾದ ವೃದ್ದನನ್ನು ಪಿಆರ್ಒ ಕೆಲಸಕ್ಕೆ ಬಳಸಿಕೊಳ್ಳಬೇಕಿತ್ತೇ ಎಂಬುದು ಈಗ ಸಾಮಾಜಿಕ ಜಾಲತಾ ಣಗಳಲ್ಲಿ ಕೇಳಿ ಬರುತ್ತಿರುವ ಪ್ರಶ್ನೆಯಾಗಿದೆ.






