ಆಹಾರ ನೀಡಲು ತಡವಾಯಿತೆಂದು ಆರೋಪಿಸಿ  ನೌಕರನಿಗೆ ಹಲ್ಲೆ: ಮೂವರ ವಿರುದ್ಧ ಕೇಸು

ಕಾಸರಗೋಡು: ಆಹಾರ ನೀಡಲು ತಡವಾಯಿತು ಹಾಗೂ ಆಹಾರ ಕಡಿಮೆಯಾಯಿತೆಂದು ಆರೋಪಿಸಿ ಹೋಟೆಲ್ ನೌಕರನಿಗೆ ಹಲ್ಲೆಗೈದು ಹೋಟೆಲ್‌ನ ಗಾಜು ಪುಡಿಗೈದ ಘಟನೆಗೆ ಸಂಬಂಧಿಸಿ ಮೂವರ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ನಾಯಮ್ಮಾರಮೂಲೆ ಪಡಿಂಞ್ಞಾರೆಮೂಲೆಯ ಪಿ. ಉಮ್ಮರ್ (42)ರ ದೂರಿನಂತೆ ಮುಹಮ್ಮದಲಿ, ಅಬ್ದುಲ್ ಫಿರೋಸ್, ನೌಶಾದ್ ಎಂಬಿವರ ವಿರುದ್ಧ ಕಾಸರಗೋಡು ನಗರಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಕಳೆದ ಆದಿತ್ಯವಾರ ಮಧ್ಯಾಹ್ನ ೧ ಗಂಟೆ ವೇಳೆ  ಕಾಸರಗೋಡು ಕೆಪಿಆರ್‌ರಾವ್ ರೋಡ್‌ನ ಮಲಬಾರ್ ಫಿಶ್ ಪಾಯಿಂಟ್ ಎಂಬ ಹೋಟೆಲ್‌ನಲ್ಲಿ ಘಟನೆ ನಡೆದಿದೆ. ಆಹಾರ ನೀಡಲು ತಡವಾಯಿತೆಂದು ಆರೋಪಿಸಿ ನೌಕರನಾದ ಉಮ್ಮರ್‌ರನ್ನು ತಡೆದು ನಿಲ್ಲಿಸಿ  ನೀರು ತುಂಬಿಸಿಟ್ಟಿದ್ದ ಸ್ಟೀಲ್‌ನ ಜಗ್‌ನಿಂದ ಮುಖಕ್ಕೆ ಹೊಡೆದಿರುವುದಾಗಿ ದೂರಲಾಗಿದೆ.  ತಲೆಗೆ ಹೊಡೆಯಲು ಯತ್ನಿಸಿದಾಗ  ಅದ ರಿಂದ ತಪ್ಪಿಸಿಕೊಂಡಿದ್ದರು. ಮತ್ತಿಬ್ಬರು ಮುಖಕ್ಕೆ ಹಾಗೂ ಬೆನ್ನಿಗೆ ಹೊಡೆದಿರು ವುದಾಗಿಯೂ  ದೂರಿನಲ್ಲಿ ತಿಳಿಸಲಾ ಗಿದೆ. ಈ ಮಧ್ಯೆ  ಆರೋಪಿಗಳ ಪೈಕಿ ಓರ್ವ ಹೋಟೆಲ್‌ನ ಮುಂ ಭಾಗದ  ಗಾಜನ್ನು ಪುಡಿಗೈದಿರುವುದಾ ಗಿಯೂ ಈ ವೇಳೆ ಸಮೀಪದಲ್ಲಿ ನಡೆದು ಹೋಗುತ್ತಿದ್ದ ಬಾಲಕಿಗೆ ಗಾಯಗೊಂ ಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

RELATED NEWS

You cannot copy contents of this page