ಮತದಾರರ ಪಟ್ಟಿ ನವೀಕರಣೆ: ಸುಳ್ಳು ದೂರು ನೀಡುವವರ ವಿರುದ್ಧ ಕೇಸು-ಜಿಲ್ಲಾಧಿಕಾರಿ

ಕಾಸರಗೋಡು:  ಮತದಾರರ ಪಟ್ಟಿಯ ಕುರಿತು ಉದ್ದೇಶಪೂರ್ವಕ ವಾಗಿ ತಪ್ಪಾದ ಮಾಹಿತಿಗಳನ್ನು ಸೇರಿಸಿ ದೂರು ನೀಡುವುದು ಕಾನೂನುಪ್ರಕಾರ ಶಿಕ್ಷಾರ್ಹವಾದ ಅಪರಾಧವಾಗಿದೆ ಯೆಂದು ಪರಿಗಣಿಸಿ ದೂರುಗಾರನ ವಿರುದ್ಧ ಕೇಸು ದಾಖಲಿಸಿ ಕಾನೂನುಕ್ರಮ ಕೈಗೊಳ್ಳಲಾಗುವುದೆಂದು ಚುನಾವಣಾ ರಿಜಿಸ್ಟ್ರೇಶನ್ ಆಫೀಸರ್   ತಿಳಿಸಿದ್ದಾರೆ. ಆರೋಪ ಸಾಬೀತುಗೊಂಡಲ್ಲಿ ಒಂದು ವರ್ಷ ವರೆಗೆ ಸಜೆ, ದಂಡ ಅಥವಾ ಅವೆರಡೂ ಸೇರಿ ಶಿಕ್ಷೆ ಲಭಿಸುವು ದೆಂದು ಅಧಿಕೃತ ವರದಿಯಲ್ಲಿ ತಿಳಿಸಲಾಗಿದೆ.

ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಪೈವಳಿಕೆ ಪ್ರದೇಶಕ್ಕೆ ಸಂಬಂಧಪಟ್ಟು  ಭಾರತೀಯ ಪೌರತ್ವವಿಲ್ಲ ಎಂದು ಆರೋಪಿಸಿ ಮುಹಮ್ಮದ್ ಎಂಬ ಮತ ದಾರನನ್ನು ಪಟ್ಟಿಯಿಂದ ಹೊರತುಪಡಿ ಸಬೇಕೆಂದು ಆಗ್ರಹಿಸಿ ಫಾರ್ಮ್ ೭ರ ಪ್ರಕಾರ ಸಲ್ಲಿಸಿದ ದೂರಿನಲ್ಲಿ  ನಡೆದ ಮಾಹಿತಿ ಸಂಗ್ರಹ ವೇಳೆ  ದೂರುಗಾರ  ಹಿಯರಿಂಗ್‌ಗೆ ಹಾಜರಾಗಿದ್ದರೂ  ತನ್ನ ಆರೋಪವನ್ನು ಸಾಬೀತುಪಡಿಸುವ ಯಾವುದೇ ಪುರಾವೆಗಳನ್ನು ಸಲ್ಲಿಸಿಲ್ಲ.

ಹಿಯರಿಂಗ್‌ನಲ್ಲಿ ನಡೆಸಿದ ದಾಖಲೆ ಪರಿಶೀಲನೆ ಮತ್ತು ಮಾಹಿತಿ ಸಂಗ್ರಹವನ್ನು ಆಧಾರವಾಗಿರಿಸಿ ದೂರು ಅಸತ್ಯ ಹಾಗೂ ಆಧಾರ ರಹಿತ ವಾಗಿದೆಯೆಂದು  ಪತ್ತೆಹಚ್ಚಿರುವುದಾಗಿ ಚುನಾವಣಾ ರಿಜಿಸ್ಟ್ರೇಶನ್ ಆಫೀಸರ್ ತಿಳಿಸಿದ್ದಾರೆ.  ಮುಹಮ್ಮದ್‌ರ ಹೆಸರು  ಪ್ರಸ್ತುತ ಮತದಾರರ ಪಟ್ಟಿಯಲ್ಲಿ  ಉಳಿಸಿಕೊಳ್ಳಲು ಚುನಾವಣಾ ರಿಜಿಸ್ಟ್ರೇಶನ್ ಆಫೀಸರ್ ತಿಳಿಸಿದ್ದಾರೆ. ಮತದಾರರ ಪಟ್ಟಿಯ ಮಹತ್ವ  ಖಚಿತಪಡಿಸಲು ಫಾರ್ಮ್ ೭ರ ಪ್ರಕಾರ ದೂರು ಸಲ್ಲಿಸು ವುದು ಕಾನೂನು ರೀತಿಯ ಹಕ್ಕಾಗಿದೆ ಯಾದರೂ ಉದ್ದೇಶಪೂರ್ವಕವಾಗಿ ಸುಳ್ಳು ಮಾಹಿತಿಗಳನ್ನು ನೀಡಿ  ಪ್ರಜಾ ಪ್ರಭುತ್ವ ಪ್ರಕ್ರಿಯೆಗೆ ಭಂಗ  ಸೃಷ್ಟಿಸುವ ಯತ್ನಗಳು ಯಾವ ಭಾಗದಿಂದ ಉಂಟಾದರೂ ಅದರ ವಿರುದ್ಧ ಕಠಿಣ ಕಾನೂನುಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಲಾಗಿದೆ. ಸ್ವತಂತ್ರ ಹಾಗೂ   ಪಾರ ದರ್ಶಕ ಚುನಾವಣಾ ಪ್ರಕ್ರಿಯೆಯನ್ನು ಖಚಿತಪಡಿಸಲು ಮತದಾರರ ಪಟ್ಟಿಯ  ಪವಿತ್ರತೆ ನಿರ್ಣಾಯಕವಾಗಿದೆ. ಆಧಾರ ರಹಿತ ಹಾಗೂ ಸುಳ್ಳು ದೂರುಗಳು ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಸಲಿದೆ. ಆದ್ದರಿಂದ ಎಲ್ಲರೂ ಜವಾಬ್ದಾರಿಯೊಂದಿಗೆ ವರ್ತಿಸಿ ಕಾನೂನು ಪ್ರಕ್ರಿಯೆಯಲ್ಲಿ ಸಹಕರಿ ಸಬೇಕೆಂದೂ  ಜಿಲ್ಲಾ ಚುನಾವಣಾ ಧಿಕಾರಿಯಾದ ಜಿಲ್ಲಾಧಿಕಾರಿ ಕೆ. ಇಂಭಶೇಖರ್ ವಿನಂತಿಸಿದ್ದಾರೆ.

RELATED NEWS

You cannot copy contents of this page