ವಾಹನಗಳಲ್ಲಿ ಸಾಗಿಸತ್ತಿದ್ದ 345.6 ಲೀಟರ್ ಗೋವಾ ಮದ್ಯ ವಶ: ಮೂವರ ವಿರುದ್ಧ ಪ್ರಕರಣ ದಾಖಲು

ಬೇಳ: ಎರಡು ವಾಹನಗಳಲ್ಲಾಗಿ ಅಕ್ರಮವಾಗಿ ಸಾಗಿಸುತ್ತಿದ್ದ 345.6 ಲೀಟರ್ ಗೋವಾ ನಿರ್ಮಿತ ಮದ್ಯವನ್ನು ಕಾಸರಗೋಡು ಎಕ್ಸೈಸ್ ಎನ್‌ಫೋರ್ಸ್‌ಮೆಂಟ್ ಆಂಡ್ ಆಂಟಿ ನರ್ಕೋಟಿಕ್ಸ್ ಸ್ಪೆಷಲ್ ಸ್ಕ್ವಾಡ್ ವಶಪಡಿಸಿಕೊಂಡಿದೆ.

ಫೆ.೧೭ರಂದು ತಡರಾತ್ರಿ ಬೇಳದ ದೊಡ್ಯಡ್ಕದಲ್ಲಿ ಈ ಅಬಕಾರಿ ಕಾರ್ಯಾ ಚರಣೆ ನಡೆದಿದೆ. ಮಾಲು ಸಾಗಿಸಲು ಉಪಯೋಗಿಸಲಾದ ಎರಡು ವಾಹನ ಗಳನ್ನು ಅಬಕಾರಿ ತಂಡ ವಶಕ್ಕೆ ತೆಗೆದುಕೊಂಡಿದೆ. ಇದಕ್ಕೆ ಸಂಬಂಧಿಸಿ ದಿಲೀಪ್ ಡಿಸೋಜಾ ಕೆ, ರಾಜೇಶ್ ಕೆ, ಮತ್ತು ನಿತೇಷ್ ಕೆ. ಎಂಬವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆದರೆ ಇವರು ತಪ್ಪಿಸಿಕೊಂಡಿರುವ ಕಾರಣದಿಂ ದಾಗಿ ಅವರನ್ನು ಸಕಾಲದಲ್ಲಿ ಬಂಧಿಸಲು ಸಾಧ್ಯವಾಗಿಲ್ಲವೆಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ.

ಸ್ಪೆಷಲ್ ಸ್ಕ್ವಾಡ್‌ನ ಎಕ್ಸೈಸ್ ಇನ್ಸ್‌ಪೆಕ್ಟರ್ ವಿಷ್ಣು ಪ್ರಕಾಶ್ ನೇತೃ ತ್ವದಲ್ಲಿ ಪ್ರಿವೆಂಟೀವ್ ಆಫೀಸರ್‌ಗಳಾದ ಕೆ.ವಿ. ರಂಜಿತ್, ಮೊಹಮ್ಮದ್ ಕಬೀರ್, ಆರ್. ರಮೇಶ್, ಸಿವಿಲ್ ಎಕ್ಸೈಸ್ ಆಫೀಸರ್‌ಗಳಾದ ಸೋನು ಸೆಬಾಸ್ಟಿಯನ್, ಶೈಲೇಶ್ ಕುಮಾರ್, ವಿ. ಮಂಜುನಾಥನ್, ಮೋಹನ್ ಕುಮಾರ್, ವಿ.ವಿ. ಶಿಜಿತ್ ಮತ್ತು ಟಿ.ವಿ. ಧನ್ಯ ಎಂಬವರನ್ನೊಳಗೊಂಡ ಅಬಕಾರಿ ತಂಡ ಈ ಕಾರ್ಯಾಚರಣೆ ನಡೆಸಿದೆ.

RELATED NEWS

You cannot copy contents of this page