ನಿವೃತ್ತ ಯೋಧ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಬದಿಯಡ್ಕ: ಆಹಾರ ಸೇವಿಸಿ ನಿದ್ರಿಸಿದ್ದ ನಿವೃತ್ತ ಯೋಧ  ಇಂದು ಬೆಳಿಗ್ಗೆ ಮರದಲ್ಲಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ ನೆಕ್ರಾಜೆ, ಪುಂಡೂರು ರಾಮ್‌ನಿವಾಸ್‌ನ ದಿ|  ರಾಮನ್- ಚಿಟ್ಟೇಯಿ ದಂಪತಿಯ ಪುತ್ರ ಗೋಪಾಲನ್ (64) ಮೃತ ಪಟ್ಟ ವ್ಯಕ್ತಿಯಾಗಿದ್ದಾರೆ. ನಿನ್ನೆ ರಾತ್ರಿ ಆಹಾರ ಸೇವಿಸಿದ ಬಳಿಕ ಇವರು ನಿದ್ರಿಸಿದ್ದರು. ಇಂದು ಬೆಳಿಗ್ಗೆ ಇವರು ನಾಪತ್ತೆಯಾದುದರಿಂದ ಶೋಧ ನಡೆಸುತ್ತಿದ್ದಂತೆ ಬಾವಿ ಸಮೀಪದ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆಂದು ಸಂಬಂಧಿಕರು ತಿಳಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಲಾಗಿದೆ. ಬದಿಯಡ್ಕ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಮೃತರು ಪತ್ನಿ ಶೈಲಜಾ, ಮಕ್ಕಳಾದ ದಿವ್ಯ, ದೀಪಕ್, ಅಳಿಯ ಟಿ. ರಜೀಶ್ (ಎಸ್‌ಸಿಪಿಒ ಬೇಡಗಂ), ಸಹೋದರ- ಸಹೋದರಿಯರಾದ ಕೃಷ್ಣನ್, ಕುಮಾರನ್, ಭಾಸ್ಕರನ್, ಸರೋಜಿನಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾಲೆ. ಇನ್ನಿಬ್ಬರು ಸಹೋದರರಾದ ನಾರಾಯಣನ್ ಹಾಗೂ ಅಪ್ಪಕುಂಞಿ ಎಂಬಿವರು ಈ ಹಿಂದೆ ನಿಧನರಾಗಿದ್ದಾರೆ.

RELATED NEWS

You cannot copy contents of this page