ಬಂದ್ಯೋಡಿನಲ್ಲಿ ಸರಣಿ ವಾಹನ ಅಪಘಾತ: ಓರ್ವ ಮೃತ್ಯು; ಇನ್ನೋರ್ವನಿಗೆ ಗಂಭೀರ

ಕುಂಬಳೆ: ರಾಷ್ಟ್ರೀಯ ಹೆದ್ದಾರಿಯ ಬಂದ್ಯೋಡು ಸಮೀಪ ಸರ್ವೀಸ್ ರಸ್ತೆಯಲ್ಲಿ ಸಂಭವಿಸಿದ ಸರಣಿ ವಾಹನ ಅಪಘಾತದಲ್ಲಿ ಗಂಭೀರ ಗಾಯಗೊಂ ಡಿದ್ದ ಓರ್ವ ಮೃತಪಟ್ಟ ಬಗ್ಗೆ ವರದಿಯಾಗಿದೆ. ಇನ್ನೋರ್ವನನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.  ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಬಳಿಯ ಪಡ್ನಡ್ಕ ಏನೆಕಲ್ಲು ನಿವಾಸಿ ಸುರೇಶ್ ರೈ ಎಂಬವರ ಪುತ್ರ ನಿರಂಜನ್ ಕೆ. (24) ಮೃತಪಟ್ಟ ದುರ್ದೈವಿಯಾಗಿದ್ದಾರೆ. ಮಂಗಳೂರು ಶಕ್ತಿನಗರ ನೀತಿನಗರದ ಬೆನ್ನಿ ಎಂ.ಜೆ. ಎಂಬವರ ಪುತ್ರ ಕೃತಿಕ್ ಬೆನ್ನಿ (23) ಗಂಭೀರ ಗಾಯಗೊಂಡಿದ್ದು, ಇವರನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.  ಇಂದು ಮುಂಜಾನೆ 12.40ರ ವೇಳೆ ಅಪಘಾತ ಸಂಭವಿಸಿತ್ತು. ಪಿಕಪ್ ಹಾಗೂ ಎರಡು ಬೈಕ್‌ಗಳು ಢಿಕ್ಕಿ ಹೊಡೆದು ಈ ಅಪಘಾತವುಂಟಾಗಿದೆ.

ಮಂಗಳೂರಿನಿಂದ ಕಾಸರಗೋಡು ಭಾಗಕ್ಕೆ ಪ್ರವಾಸಕ್ಕಾಗಿ  ಬಂದವರು ಐದು ಬೈಕ್‌ಗಳಲ್ಲಿ ಮರಳುತ್ತಿದ್ದರು. ಈ ಸಂದ ರ್ಭದಲ್ಲಿ ಎರಡು ಬೈಕ್‌ಗಳು ಪಿಕಪ್‌ಗೆ ಢಿಕ್ಕಿ ಹೊಡೆದಿರುವುದಾಗಿ ಹೇಳಲಾಗುತ್ತಿದೆ. ಇದರಿಂದ ನಿರಂಜನ್ ಹಾಗೂ ಕೃತಿಕ್ ಬೆನ್ನಿ ಗಂಭೀರ ಗಾಯಗೊಂಡಿದ್ದರು. ಇವರನ್ನು ಮೊದಲು  ಬಂದ್ಯೋಡಿನ ಖಾಸಗಿ ಆಸ್ಪತ್ರೆಗೆ ತಲುಪಿಸಲಾಗಿತ್ತು. ಆದರೆ ಗಾಯ ಗಂಭೀರವಾಗಿರುವುದರಿಂದ ಇವರನ್ನು ಮಂಗಳೂರಿನ ಆಸ್ಪತ್ರೆಗೆ ಸಾಗಿಸುವಂತೆ ಆಸ್ಪತ್ರೆ ಅಧಿಕಾರಿಗಳು ಸೂಚಿಸಿದ್ದರು. ಇದರಂತೆ ಮಂಗಳೂರಿನ ಆಸ್ಪತ್ರೆಗೆ ತಲುಪಿಸಿ ತುರ್ತು ಚಿಕಿತ್ಸೆ ನೀಡಿದರೂ ನಿರಂಜನ್‌ರ ಜೀವ ರಕ್ಷಿಸಲು ಸಾಧ್ಯವಾಗಲಿಲ್ಲ. ಅಪಘಾತ ಸ್ಥಳಕ್ಕೆ ಕುಂಬಳೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ಆರಂಭಿಸಿದ್ದಾರೆ.

RELATED NEWS

You cannot copy contents of this page