ನಾಯಮ್ಮಾರಮೂಲೆಯ ಸಾಫ್ಟ್ ಡ್ರಿಂಕ್ಸ್ ಫ್ಯಾಕ್ಟರಿಯಲ್ಲಿ ಬೆಂಕಿ ಅನಾಹುತ

ಕಾಸರಗೋಡು: ನಾಯಮ್ಮಾರಮೂಲೆಯಲ್ಲಿ  ಕಾರ್ಯವೆಸಗುತ್ತಿರುವ ಮುಹ್‌ಸಿನ್ (ಕಲ್ಪಕ ಹೌಸ್) ಎಂಬವರ   ಮಾಲಕತ್ವದಲ್ಲಿರುವ ಫಾಕಿಯಾ ಸಾಫ್ಟ್ ಡ್ರಿಂಕ್ಸ್ ಎಂಬ ಹೆಸರಿನ ಕಾರ್ಖಾನೆಗೆ ಇಂದು ಮುಂಜಾನೆ ಸುಮಾರು 1 ಗಂಟೆ ವೇಳೆ ಬೆಂಕಿ ತಗಲಿ ಭಾರೀ ನಾಶನಷ್ಟವುಂಟಾಗಿದೆ. ಫ್ಯಾಕ್ಟರಿ  ಪರಿಸರದಲ್ಲಿ  ರಾಶಿ ಹಾಕಿದ್ದ  ತೆಂಗಿನ ಸಿಪ್ಪೆಗೆ ಮೊದಲು ಬೆಂಕಿ ತಗಲಿ   ಬಳಿಕ ಅದು ಫ್ಯಾಕ್ಟರಿಗೆ ಹಬ್ಬಿತೆನ್ನಲಾಗಿದೆ. ವಿಷಯ ತಿಳಿದ ಅಸಿಸ್ಟೆಂಟ್ ಸ್ಟೇಶನ್ ಆಫೀಸರ್ ಎ. ಜಾಫರ್‌ಖಾನ್, ಸೀನಿಯರ್ ಫಯರ್ ಆಂಡ್ ರೆಸ್ಕ್ಯೂ ಆಫೀಸರ್ ವಿ. ಸುಕು ಎಂಬವರ ನೇತೃತ್ವದ  ಕಾಸರಗೋಡು ಅಗ್ನಿಶಾಮಕದಳದ ೨೫ರಷ್ಟು ಸಿಬ್ಬಂದಿಗಳು ತಮ್ಮ ಎರಡು ವಾಹನಗಳಲ್ಲಿ ತಕ್ಷಣ ಘಟನೆ ನಡೆದ ಸ್ಥಳಕ್ಕಾಗಮಿಸಿ ಸತತ ತಾಸುಗಳ ತನಕ ನಡೆಸಿದ ಕಾರ್ಯಾಚರಣೆಯಲ್ಲಿ  ಮುಂಜಾನೆ 3 ಗಂಟೆ ವೇಳೆಗೆ  ಬೆಂಕಿ ಶಮನಗೊಳಿಸಿದರು. ಇದರಿಂದಾಗಿ ಸಂಭಾವ್ಯ ಭಾರೀ ದೊಡ್ಡ ಅನಾಹುತ ತಪ್ಪಿದಂತಾಗಿದೆ. ಕಾಸರಗೋಡು ಮಾತ್ರವಲ್ಲ ಉಪ್ಪಳ, ಹೊಸದುರ್ಗ ಅಗ್ನಿಶಾಮಕದಳದವರು ಈ ರಕ್ಷಣಾ ಕಾರ್ಯಾಚರಣೆಯಲ್ಲಿ ಸಹಾಯವೊದಗಿಸಿದರು.

RELATED NEWS

You cannot copy contents of this page