ಕಾಸರಗೋಡು: ದೆಹಲಿ ಕೇಂದ್ರವಾಗಿ ಕಾರ್ಯಾಚರಿಸುವ ವರ್ಲ್ಡ್ ಕಲ್ಚರಲ್ ಆಂಡ್ ಎಜ್ಯುಕೇಶನಲ್ ಆರ್ಗನೈಸೇಶನ್‌ನ ಗೌರವ ಡಾಕ್ಟರೇಟ್ ಇ. ಅಬ್ದುಲ್ ಕುಂಞಿಯವರಿಗೆ ಲಭಿಸಿದೆ. ಶಿಕ್ಷಣ, ಸಾಮಾಜಿಕ ವಲಯದಲ್ಲಿ ಕೈಗೊಂಡ ಚಟುವಟಿಕೆಗಳನ್ನು ಪರಿಗಣಿಸಿ ಈ ಗೌರವ ಲಭಿಸಿದೆ. ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಾಲಿವುಡ್ ನಟ ಗುಲ್ಶನ್ ಗ್ರೋವರ್ ಪದವಿ ಪ್ರದಾನ ಮಾಡಿದರು.
ಶಿಕ್ಷಣ, ಸಾಮಾಜಿಕ ವಲಯದಲ್ಲಿ ಇ. ಅಬ್ದುಲ್ಲ ಕುಂಞಿ ಸಕ್ರಿಯರಾಗಿದ್ದಾರೆ. ಕಾಸರಗೋಡು ಫ್ಯಾಮಿಲಿ ವೆಲ್ಫೇರ್ ಸೊಸೈಟಿ ಅಧ್ಯಕ್ಷನಾಗಿರುವ ಇವರು ರಸ್ತೆ ಅಪಘಾತಗಳ ಬಗ್ಗೆ ಜನರಲ್ಲಿ ತಿಳುವಳಿಕೆ ಮೂಡಿಸಲು ಹಲವಾರು ಕಾರ್ಯಗಳನ್ನು ಹಮ್ಮಿಕೊಂಡಿದ್ದರು. ೨೦೧೩ರಲ್ಲಿ ಕಾಸರಗೋಡಿನಿಂದ ತಿರುವನಂತಪುರ ವರೆಗೆ ರಸ್ತೆ ಸುರಕ್ಷಾ ಯಾತ್ರೆ ನಡೆಸಿದ್ದರು. ಜೊತೆಗೆ ಎಲ್ಲಾ ಜಿಲ್ಲೆಗಳಲ್ಲೂ ಚಿತ್ರ ಪ್ರದರ್ಶನ ಕೈಗೊಂಡಿದ್ದರು.
ಲೋಕಲ್ ರೂಟ್‌ಗಳಲ್ಲಿ ಸಂಚಾರ ನಡೆಸುವ ಖಾಸಗಿ ಬಸ್‌ಗಳಿಗೆ ನೀಲಿ ಬಣ್ಣ ಹಚ್ಚಲು ನಿರ್ದೇಶಿಸಿದ ಇವರ ನಿರ್ದೇಶವನ್ನು ಸಾರಿಗೆ ಇಲಾಖೆ ಬಳಿಕ ಜ್ಯಾರಿಗೊಳಿಸಿದೆ. ಟೀಚರ್ಸ್ ಟ್ರೈನಿಂಗ್ ಕಾಲೇಜ್ ಸಹಿತ ಶಿಕ್ಷಣಸಂಸ್ಥೆಗಳಿಗೆ ಇವರು ನೇತೃತ್ವ ನೀಡುತ್ತಿದ್ದಾರೆ. ಕರ್ಷಕಶ್ರೀ ಮಿಲ್ಕ್‌ನ ಡೈರೆಕ್ಟರ್ ಆಗಿರುವ ಇವರು ಕೋಟೆಗಳ ನಾಡು ಎಂಬ ಪುಸ್ತಕ ರಚಿಸಿದ್ದು, ಆರಕ್ ಎಂಬ ಸಾಕ್ಷ್ಯ ಚಿತ್ರವನ್ನು ನಿರ್ಮಿಸಿದ್ದಾರೆ.







