ಸೀತಾಂಗೋಳಿ: ಮುಗು ನೀರಮಟ್ಟು ಎಂಬಲ್ಲಿನ ಪಿ. ಅಬ್ದುಲ್ ಖಾದರ್ (55) ಕೆಲಸ ನಿರತನಾಗಿದ್ದ ವೇಳೆ ಕುಸಿದು ಬಿದ್ದು ಮೃತಪಟ್ಟರು. ಶೇಣಿ ಬಳಿಯ ಏಳ್ಕಾನದಲ್ಲಿ ಇವರು ತೋಟದಲ್ಲಿ ಮೊನ್ನೆ ಕೆಲಸ ನಿರತನಾಗಿದ್ದ ವೇಳೆ ಕುಸಿದು ಬಿದ್ದಿದ್ದರು. ಕೂಡಲೇ ಜತೆಗಿದ್ದವರು ಉಕ್ಕಿನಡ್ಕದಲ್ಲಿರುವ ಕಾಸರಗೋಡು ಜಿಲ್ಲಾ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಮೃತರು ಪತ್ನಿ ಖೈರುನ್ನಿಸ, ಪುತ್ರ ಶಿಬಿ, ಸಹೋದರ- ಸಹೋದರಿಯರಾದ ಮುಹಮ್ಮದ್, ಹಮೀದ್, ಅಲಿಮ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.






