ಚಿನ್ನ ವ್ಯಾಪಾರಿಯನ್ನು ಕಾರಿನಲ್ಲಿ ಅಪಹರಿಸಿ 41 ಲಕ್ಷ ರೂ. ದರೋಡೆ: ಕಾಸರಗೋಡಿನ ಮೂವರ ಸೆರೆ

ಕಾಸರಗೋಡು: ಚಿನ್ನದ ವ್ಯಾಪಾರಿಯನ್ನು ಕಾರಿನಲ್ಲಿ ಅಪಹರಿಸಿಕೊಂಡು ಹೋಗಿ ೪೧ ಲಕ್ಷ ರೂ. ದರೋಡೆಗೈದ ಪ್ರಕರಣಕ್ಕೆ ಸಂಬಂಧಿಸಿ ಕಾಸರಗೋಡಿನ ಮೂವರನ್ನು ಕೊಯಂಬತ್ತೂರು ಕೆ.ಜಿ. ಚಾವಡಿ ಪೊಲೀಸರು ಬಂಧಿಸಿದ್ದಾರೆ.

ಚೆರ್ವತ್ತೂರು ಮುಂಡಕಂಡ ವೀಥಿಕಿಳಕ್ಕೇ ವೀಟಿಲ್‌ನ ನಿತಿನ್ (33), ನೀಲೇಶ್ವರ ಚಾತಮತ್ತ್ ಮೀತಲೆ ವೀಟಿಲ್‌ನ ಶ್ರೀಕುಮಾರ್ (31) ಮತ್ತು  ನೀಲೇಶ್ವರ ಪಳ್ಳಿಕ್ಕರೆ ಕನಕವೀಟಿಲ್‌ನ ಸುಧೀಶ್ (39) ಎಂಬಿವರು ಬಂಧಿತರಾದ ಆರೋಪಿಗಳಾಗಿದ್ದಾರೆ.  ದರೋಡೆಗೈದ ಹಣದ ಪೈಕಿ 2೦,೦೦೦ ರೂ.,  ಅಪಹರಣಕ್ಕಾಗಿ ಉಪಯೋಗಿಸಲಾದ ಕಾರು ಮತ್ತು ಮೊಬೈಲ್ ಫೋನ್ ಪೊಲೀಸರು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ.

ಚಿನ್ನ ವ್ಯಾಪಾರಿ ಪಟ್ಟಾಂಬಿ ನಡುವಟ್ಟಂ ನಿವಾಸಿ ಲುಕ್ಮಾನ್ ಮುಹಮ್ಮದ್ (56) ಎಂಬವರು ಕೊಯಂಬತ್ತೂರಿನಲ್ಲಿ ಚಿನ್ನ ಮಾರಾಟಮಾಡಿ ಫೆಬ್ರವರಿ 19ರಂದು ರಾತ್ರಿ ದ್ವಿಚಕ್ರ ವಾಹನದಲ್ಲಿ ತಮ್ಮ ಊರಿಗೆ ಹಿಂತಿರುಗುತ್ತಿದ್ದ ದಾರಿ ಮಧ್ಯೆ ಪಾಲಕ್ಕಾಡ್-ಕೊಯಂಬತ್ತೂರು ರಸ್ತೆಯ ಮದುಕರಮರಪ್ಪಾಲಗ ತಲುಪಿದಾಗ ಅಲ್ಲಿಗೆ ಕಾರಿನಲ್ಲಿ ಬಂದ ಅಕ್ರಮಿಗಳ ತಂಡ ಅವರನ್ನು ತಡೆದು ನಿಲ್ಲಿಸಿ ಬಲವಂತವಾಗಿ ಕಾರಿಗೇರಿಸಿ ಅಪಹರಿಸಿ ಕೊಳಿಞ್ಞಂಬಾರ ಮನೋನ್‌ಪಾರ ಎಂಬಲ್ಲಿಗೊಯ್ದು ಅಲ್ಲಿ ಲುಕ್ಮಾನ್‌ಗೆ ಹಲ್ಲೆ ನಡೆಸಿ ಹಣ,  ಮೊಬೈಲ್ ಫೋನ್ ಮತ್ತು ದ್ವಿಚಕ್ರ ವಾಹನವನ್ನು ದರೋಡೆಗೈದ ಬಳಿಕ ಅವರನ್ನು ಆಕ್ರಮಿಸಿ ಅಲ್ಲೇ ಉಪೇಕ್ಷಿಸಿ ಪರಾರಿಯಾದರೆಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಲಾಗಿದೆ.

ಲುಕ್ಮಾನ್‌ರನ್ನು ಅಪಹರಿಸಿದ ಕಾರಿನಲ್ಲಿ ಒಟ್ಟು  ಆರು ಮಂದಿ ಇದ್ದರು. ಮಾತ್ರವಲ್ಲ ದ್ವಿಚಕ್ರ ವಾಹನದಲ್ಲಿ ಬಂದ ಇತರ ಇಬ್ಬರು  ಸೇರಿದಂತೆ ಈ ದರೋಡೆ ತಂಡದಲ್ಲಿ ಒಟ್ಟು ಏಳು ಮಂದಿ ಒಳಗೊಂಡಿ ದ್ದರೆಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

ಇದರಂತೆ ಇತರ ಐವರು ಆರೋಪಿಗಳ ಪತ್ತೆಗಾಗಿರುವ ಕಾರ್ಯಾಚರಣೆಯನ್ನು ಪೊಲೀಸರು ತೀವ್ರಗೊಳಿಸಿದ್ದಾರೆ. ಬಂಧಿತರಾದ ಮೂವರು ಆರೋಪಿಗಳನ್ನು ನಂತರ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.

RELATED NEWS

You cannot copy contents of this page