ಬೋವಿಕ್ಕಾನ: ಕಂಗಿನ ತೋಟಕ್ಕೆ ನೀರು ಹಾಯಿಸಲು ಹೋದ ವ್ಯಕ್ತಿ ಬಾವಿಗೆ ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ. ಬೋವಿಕ್ಕಾನ ಸಮೀಪದ ಮುಂಡಕೈ ಕೆ.ಕೆ. ವಳಪ್ಪಿನ ಕೆ. ಚಂದ್ರನ್ (45) ಸಾವನ್ನಪ್ಪಿದ ದುರ್ದೈವಿ. ಇವರು ಇರಿಯಣ್ಣಿಯ ಕೈಲಾಸ್ ಆಡಿಟೋರಿ ಯಂನ ಮೆನೇಜರ್ ಆಗಿದ್ದರು. ಮೊನ್ನೆ ಸಂಜೆ ಅಲ್ಲಿನ ಕೆಲಸ ಮುಗಿಸಿ ಮನೆಗೆ ತೆರಳಿದ ಚಂದ್ರನ್ ತಮ್ಮ ಅಡಿಕೆ ತೋಟಕ್ಕೆ ನೀರು ಹಾಯಿಸಲೆಂದು ಹೋಗುವ ವೇಳೆ ಆವರಣವಿಲ್ಲದ ಬಾವಿಗೆ ಕಾಲು ಜಾರಿ ಬಿದ್ದಿದ್ದರೆನ್ನಲಾ ಗಿದೆ. ಬಾವಿಗೆ ಬಿದ್ದ ಶಬ್ದ ಕೇಳಿದ ಸಮೀಪ ನಿವಾಸಿಗಳು ತಕ್ಷಣ ತಲುಪಿ ಚಂದ್ರನ್‌ರನ್ನು ಮೇಲಕ್ಕೆತ್ತಿದರೂ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ.
ವಿಷಯ ತಿಳಿದ ಅಗ್ನಿಶಾಮಕದಳ ಸ್ಥಳಕ್ಕಾಗಮಸಿದ್ದರು. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೊಳಪಡಿಸಲಾ ಯಿತು. ನಾರಾಯಣ ನಾಯರ್-ಕಾರ್ತ್ಯಾಯಿನಿ ದಂಪತಿ ಪುತ್ರನಾಗಿರುವ ಚಂದ್ರನ್ ಪತ್ನಿ ರೇಷ್ಮಾ, ಮಕ್ಕಳಾದ ಶಿವಣ್ಯ, ಶಿವಧ್ಯಾನ್, ಸಹೋದರ ಗಂಗಾಧರನ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.






