ಅನಧಿಕೃತ ನಿರ್ಮಾಣ: ಕಾಸರಗೋಡು ನಗರಸಭಾ ಅಧ್ಯಕ್ಷೆ ಕಾನೂನು ವಿರುದ್ಧರೊಂದಿಗೆ -ಬಿಜೆಪಿ ಆರೋಪ

ಕಾಸರಗೋಡು: ಕಾಸರಗೋಡು ನಗರಸಭೆ ಸ್ವಜನ ಪಕ್ಷಪಾತ ಹಾಗೂ ಭ್ರಷ್ಟಾಚಾರ ಕಾನೂನು ವಿರುದ್ಧ ನಿಲುವನ್ನು ತನ್ನ ಜಾಯಮಾನ ಮಾಡಿಕೊಂಡಿರುವುದಾಗಿ ಬಿಜೆಪಿ ಸದಸ್ಯರು ಕೌನ್ಸಿಲ್ ಸಭೆಯಲ್ಲಿ ಆರೋಪಿಸಿದರು. ನಗರಸಭಾ ಅಧ್ಯಕ್ಷೆಯ ಈ ರೀತಿಯ ನಿಲುವುಗಳನ್ನು ಪ್ರತಿಭಟಿಸಿ ಬಿಜೆಪಿ ಸದಸ್ಯರು ಸಭೆಯಲ್ಲಿ ಎದ್ದು ನಿಂತು ಪ್ರತಿಭಟಿಸಿದರು. ಕಾಸರಗೋಡು ಹೊಸ ಬಸ್ ನಿಲ್ದಾಣದ ನಗರಸಭಾ ಕಟ್ಟಡ ಬಾಡಿಗೆಗೆ ಪಡೆದ ರಿಶಾದ್ ಕೆ.ಎಂ. ಎಂಬ ವ್ಯಕ್ತಿ ನಗರಸಭೆಯ ಅರಿವು, ಅನುವಾದ ಇಲ್ಲದೆ ಕಟ್ಟಡದ ಮುಂಭಾಗದಲ್ಲಿ ನಡೆಸಿದ ಅನಧಿಕೃತ ನಿರ್ಮಾಣವನ್ನು ಮುರಿದು ತೆಗೆಯಲಿರುವ ನಗರಸಭೆ ಕಾರ್ಯದರ್ಶಿಯ ಆದೇಶವನ್ನು ನಗರಸಭಾಧ್ಯಕ್ಷೆ ಅಸಿಂಧುಗೊಳಿಸಿ ರುವುದು ಕಾನೂನಿನೊಂದಿಗಿರುವ ಸವಾಲು ಎಂದು ವಿಪಕ್ಷ ಸದಸ್ಯರು ಆರೋಪಿಸಿದರು.

ಈ ಆದೇಶದ ವಿರುದ್ಧ ರಿಶಾದ್ ನಗರಸಭಾ ಅಧ್ಯಕ್ಷೆಗೆ ನೀಡಿದ ಅಪೀಲಲ್ಲಿ ನಗರಸಭಾ ಕೌನ್ಸಿಲ್ ತಿಳಿಯದೆ ಅಧ್ಯಕ್ಷೆ ಕಾನೂನು ವಿರುದ್ಧ ತೀರ್ಮಾನ ತೆಗೆದಿರು ವುದಾಗಿ ವಿಪಕ್ಷ ಆರೋಪಿಸಿದೆ. ಕಟ್ಟಡದ ಅನಧಿಕೃತ ನಿರ್ಮಾಣದ ವಿರುದ್ಧ ಕೇರಳ ಸ್ಟೇಟ್ ಬಸ್ ಆಪರೇಟರ್ಸ್ ಫೆಡರೇಶನ್ ಪದಾಧಿಕಾರಿಗಳು ಜಿಲ್ಲಾ ಲೀಗಲ್ ಸರ್ವೀಸಸ್ ಅಥೋರಿಟಿಗೆ ದೂರು ನೀಡಿದ್ದರು. ಈ ದೂರಿನ ಆಧಾರದಲ್ಲಿ ಕಾಸರಗೋಡು ನಗರಸಭಾ ಕಾರ್ಯದರ್ಶಿ ಆರೋಪಿಯಾಗಿ ಪಿಎಲ್‌ಪಿ 4005/2025 ನಂಬ್ರ ಕೇಸು ನೋಂದಾಯಿಸಲಾಗಿತ್ತು. ಈ ಕೇಸಿನ ಆಧಾರದಲ್ಲಿ ನಗರಸಭಾ ಕಾರ್ಯದರ್ಶಿ 20-01-2026 ರಂದು 15 ದಿನದೊಳಗೆ ಅನಧಿಕೃತ ನಿರ್ಮಾಣ ತೆರವುಗೊ ಳಿಸಿ ತಿಳಿಸಬೇಕೆಂದು ಕೈವಶ ಪಡಿಸಿದವರಿಗೆ ನಿರ್ದೇಶಿಸಿದ್ದರು. ಇಲ್ಲದಿದ್ದರೆ ನಗರಸಭಾ ಕೌನ್ಸಿಲ್ ರಿಶಾದ್‌ಗೆ ನೀಡಿದ ಲೈಸನ್ಸ್ ರದ್ದುಗೊಳಿಸುವುದಾಗಿಯೂ, ಕಟ್ಟಡ ನಗರಸಭೆ ವಹಿಸಿಕೊಳ್ಳು ವುದಾಗಿಯೂ, ನಗರಸಭೆಯಲ್ಲಿ ಠೇವಣಿ ಇರಿಸಿರುವ ಡೆಪೋಸಿಟ್ ಮೊತ್ತ ನಗರಸಭಾ ಫಂಡ್‌ಗೆ ಸೇರಿಸಿಕೊಳ್ಳಲಾಗುವುದೆಂದು ನೋಟೀಸ್ ನೀಡಲಾಗಿತ್ತು. ಆದರೆ  31-01-2026ರಂದು ರಿಶಾದ್ ನಗರಸಭಾ ಅಧ್ಯಕ್ಷೆಗೆ ನೀಡಿದ  ಅಪೀಲಿನ ಆಧಾರದಲ್ಲಿ ನಗರಸಭಾ ಕಾರ್ಯದರ್ಶಿ ಕೈಗೊಂಡ ತೀರ್ಮಾನವನ್ನು ಅಧ್ಯಕ್ಷೆ ಅಸಿಂಧುಗೊಳಿಸಿ ರಿಶಾದ್‌ಗೆ ಮತ್ತೆ ಕಟ್ಟಡದಲ್ಲಿ ಕಾರ್ಯಾಚರಿಸಲು ಅನುಮತಿ ನೀಡಿರುವುದಾಗಿ ವಿಪಕ್ಷ ಮುಖಂಡ ರವೀಂದ್ರ ಪೂಜಾರಿ ತಿಳಿಸಿದ್ದಾರೆ.

You cannot copy contents of this page