ಮೆದುಳು ಆಘಾತ : ಬೇಕರಿ ಮಾಲಕ ನಿಧನ

ಕುಂಬಳೆ: ಮೆದುಳು ಆಘಾತ ಕ್ಕೊಳಗಾಗಿ ಬೇಕರಿ ಮಾಲಕ ಮೃತಪಟ್ಟ ಘಟನೆ ನಡೆದಿದೆ.

ಮೊಗ್ರಾಲ್ ನಡುಪಳ್ಳದ ಅಬ್ದುಲ್ ಅಸೀಸ್ (44) ಮೃತಪಟ್ಟ ದುರ್ದೈವಿ. ಇವರು ಮೊಗ್ರಾಲ್ ಪೇಟೆಯಲ್ಲಿರುವ ಜಾಸ್ ಬೇಕರಿಯ ಮಾಲಕನಾಗಿದ್ದರು. ನಿನ್ನೆ ಮುಂಜಾನೆ ಮಸೀದಿಗೆ ತೆರಳಲು ಸಿದ್ಧತೆ ನಡೆಸುತ್ತಿದ್ದಂತೆ ಇವರು ಕುಸಿದು ಬಿದ್ದಿದ್ದರು. ಕೂಡಲೇ ಮಂ ಗಳೂರಿನ ಖಾಸಗಿ ಆಸ್ಪತ್ರೆಗೆ ತಲುಪಿಸಲಾಗಿತ್ತು. ಅಲ್ಲಿ ನಡೆಸಿದ ತಪಾಸಣೆ ಯಲ್ಲಿ ಮೆದುಳು ಆಘಾತಗೊಂಡ ಬಗ್ಗೆ ತಿಳಿದುಬಂದಿದೆ. ಇದರಿಂದ ವೆಂಟಿಲೇಟರ್‌ನಲ್ಲಿ ದಾಖಲಿಸಿ ಚಿಕಿತ್ಸೆ ನೀಡಿದರೂ ರಾತ್ರಿ 7 ಗಂಟೆಗೆ ನಿಧನ ಸಂಭವಿಸಿದೆ.

ಅಬ್ದುಲ್ ಖಾದರ್ ಕೆ-ದನಬಿ ದಂಪತಿ ಪುತ್ರನಾದ ಮೃತರು   ಮುಸ್ಲಿಂ ಲೀಗ್‌ನ ಸಕ್ರಿಯ ಕಾರ್ಯಕರ್ತ ನಾಗಿದ್ದರು.

ಮೃತರು ಪತ್ನಿ ಶಂಸೀನ, ಮಕ್ಕಳಾದ ಸೈನಬ, ಬತೂಲ್, ಸಹರ ಫಾತಿಮ, ಸಹೋದರ-ಸಹೋದರಿಯರಾದ  ಅಶ್ರಫ್ (ಖತ್ತರ್), ಯುನೈಸ್ (ಇಲೆಕ್ಟ್ರೀಶ್ಯನ್), ನೂಹ್, ಅನಸ್ (ದುಬೈ), ಸುಹರಾ, ಅವ್ವಾಬಿ, ಮರಿಯಾಂಬಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ನಿಧನಕ್ಕೆ ಮೊಗ್ರಾಲ್ ವಲಯ ಮುಸ್ಲಿಂ ಲೀಗ್ ಕಮಿಟಿ, ಗ್ರೀನ್ ಸ್ಟಾರ್ ಮೊಗ್ರಾಲ್, ಮೊಗ್ರಾಲ್ ದೇಶೀಯ ವೇದಿ, ಸಿಟಿಸನ್ ಕ್ಲಬ್ ಕಡವತ್ ಸಂತಾಪ ಸೂಚಿಸಿದೆ.

RELATED NEWS

You cannot copy contents of this page