ಕರ್ನಾಟಕ ಮದ್ಯ ಕೈವಶವಿರಿಸಿದ ವ್ಯಕ್ತಿ ಬಂಧನ

ಕುಂಬಳೆ: ಕರ್ನಾಟಕದಲ್ಲಿ ಮಾತ್ರವೇ ಮಾರಾಟಗೈಯ್ಯ ಬಹುದಾದ ವಿದೇಶಿ ಮದ್ಯವನ್ನು ಕೈವಶವಿರಿಸಿಕೊಂಡಿದ್ದ ಓರ್ವನನ್ನು ಕುಂಬಳೆ ಅಬಕಾರಿ ಅಧಿಕಾರಿಗಳು ಸೆರೆಹಿಡಿದಿದ್ದಾರೆ.

ಕೊಯಿಪ್ಪಾಡಿ ವಿಲ್ಲೇಜ್‌ನ ನಾಯ್ಕಾಪು ನಾರಾಯಣಮಂಗಲದ ಅಕ್ಷಿತ್ ಕೆ ಎಂಬಾತ ಬಂಧಿತ ವ್ಯಕ್ತಿಯಾಗಿದ್ದಾನೆ. ಈತನ ಕೈಯಿಂದ ೫.೪ ಲೀಟರ್ ಕರ್ನಾಟಕ ನಿರ್ಮಿತ ಮದ್ಯ ವಶಪಡಿಸಲಾಗಿದೆ. ಕುಂಬಳೆ ಅಬಕಾರಿ ರೇಂಜ್ ಪ್ರಿವೆಂಟೀವ್ ಆಫೀಸರ್ ಜಿಜಿನ್ ಎಂ.ವಿ ನೇತೃತ್ವದಲ್ಲಿ ನಿನ್ನೆ ಮಧ್ಯಾಹ್ನ 12.50ರ ವೇಳೆ ಕುಂಬಳೆ ಪೇಟೆಯಲ್ಲಿ  ಗಸ್ತು ನಡೆಸುತ್ತಿದ್ದಾಗ ಬದಿಯಡ್ಕ ರಸ್ತೆಯಲ್ಲಿರುವ  ಹೋಟೆಲ್‌ವೊಂದರ ಮುಂಭಾಗ ನಿಂತಿದ್ದ ಅಕ್ಷಿತ್‌ನನ್ನು ತಪಾಸಣೆ ನಡೆಸಿದಾಗ ಮದ್ಯ ಪತ್ತೆಯಾಗಿದೆ.  ಬಳಿಕ ಆರೋಪಿ ಹಾಗೂ ಮದ್ಯವನ್ನು ಕಾಸರಗೋಡು ಜ್ಯುಡೀಶಿಯಲ್ ಪ್ರಥಮ ದರ್ಜೆ ಮೆಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದು ಆ ವೇಳೆ ಆರೋಪಿಗೆ 14 ದಿನಗಳ ರಿಮಾಂಡ್ ವಿಧಿಸಲಾಗಿದೆ.

ಪ್ರಿವೆಂಟೀವ್ ಆಫೀಸರ್ ಮೊಯ್ದೀನ್ ಸಾದಿಕ್, ಸಿವಿಲ್ ಎಕ್ಸೈಸ್ ಆಫೀಸರ್‌ಗಳಾದ ಅಖಿಲೇಶ್, ಧನೇಶ್, ಶ್ರೀನಾಥ್,  ಪ್ರಸನ್ನನ್ ಮೊದಲಾದವರಿದ್ದರು. ಕುಂಬಳೆಯಲ್ಲಿ ಅನಧಿಕೃತ ಮದ್ಯ ಮಾರಾಟ ತೀವ್ರಗೊಂಡಿದ್ದು, ಅದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

RELATED NEWS

You cannot copy contents of this page