ಕನ್ನಡ ಹೋರಾಟಗಾರ ಕೆ.ಎಂ. ಗೋಪಾಲಕೃಷ್ಣ ಭಟ್ ನಿಧನ

ಮುಳ್ಳೇರಿಯ: ಕಾರಡ್ಕ ಸಮೀಪದ ಪೊನ್ನಂಪಲ ನಿವಾಸಿ ಕೆ.ಎಂ. ಗೋಪಾಲಕೃಷ್ಣ ಭಟ್ (84) ನಿಧನ ಹೊಂದಿದರು. ಕಳೆದ ಕೆಲವು ಸಮಯದಿಂದ ಅಸೌಖ್ಯ ತಗಲಿ ಕಾಸರಗೋಡಿನ ಖಾಸಗಿ ಆಸ್ಪತ್ರೆ ಯಲ್ಲಿ ಚಿಕಿತ್ಸೆಯಲ್ಲಿದ್ದ ಇವರು ನಿನ್ನೆ ಮಧ್ಯಾಹ್ನ ನಿಧನ ಹೊಂದಿದ್ದಾರೆ. ಹಿರಿಯ ನಾಗರಿಕ ವೇದಿಕೆ ಅಧ್ಯಕ್ಷ, ಕನ್ನಡ ಹೋರಾಟಗಾರ, ಕನ್ನಡ ಅಂಕಣ ಬರಹಗಾರರಾಗಿ ಗುರುತಿಸಿ ಕೊಂಡಿದ್ದರು.  ಕೃಷಿ, ಶಿಕ್ಷಣ, ಸಾಂ ಸ್ಕೃತಿಕ, ಧಾರ್ಮಿಕ ವಲಯಗಳಲ್ಲಿ ಸಕ್ರಿಯರಾಗಿ ದುಡಿದಿದ್ದರು. ಇವರ ಪತ್ನಿ ಭಾಗ್ಯಲಕ್ಷ್ಮಿ ಈ ಹಿಂದೆ ನಿಧನ ಹೊಂದಿದ್ದಾರೆ. ಮೃತರು ಪುತ್ರನಾದ ಕವಿ, ಸಾಹಿತಿ ಬರಹಗಾರನಾಗಿರುವ ಡಾ. ನರೇಶ್, ಸೊಸೆ ದಿವ್ಯಗಂಗಾ (ಮುಖ್ಯೋಪಾಧ್ಯಾಯಿನಿ), ಸಹೋದರರಾದ ತಿರುಮಲೇಶ್ವರ ಭಟ್ (ನಿವೃತ್ತ ಬ್ಯಾಂಕ್ ಉದ್ಯೋಗಿ), ವೆಂಕಟ್ರಮಣ ಭಟ್ ಕಿಳಿಂಗಾರು ಬೆದ್ರಡಿ, ಬಾಲಸುಬ್ರಹ್ಮಣ್ಯ ಭಟ್ ಪೊನ್ನಂಪಲ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಓರ್ವ ಸಹೋದರ ಪ್ರೊ. ವೇಣುಗೋಪಾಲ ಕಾಸರಗೋಡು ಈ ಹಿಂದೆ ನಿಧನ ಹೊಂದಿದ್ದಾರೆ.

ನಿಧನಕ್ಕೆ ಕಾಸರಗೋಡಿನ ಕನ್ನಡಿಗರು, ಕಾಸರಗೋಡು ಬ್ರಾಹ್ಮಣಸಭಾ ಸಂತಾಪ ಸೂಚಿಸಿದೆ.

RELATED NEWS

You cannot copy contents of this page