ಕಾರಿನಲ್ಲಿ ಸಾಗಿಸುತ್ತಿದ್ದ 29 ಲಕ್ಷ ರೂ., 97 ಗ್ರಾಂ ಚಿನ್ನ ವಶ: ಇಬ್ಬರು ಕಸ್ಟಡಿಗೆ

ಕಾಸರಗೋಡು: ನಗರದಲ್ಲಿ ಕಾಸರಗೋಡು ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಸರಿಯಾದ ದಾಖಲುಪತ್ರಗಳಿಲ್ಲದೆ ಕಾರಿನಲ್ಲಿ ಸಾಗಿಸುತ್ತಿದ್ದ 29 ಲಕ್ಷ ರೂಪಾಯಿ ಹಾಗೂ 97 ಗ್ರಾಂ ಚಿನ್ನ ಪತ್ತೆಹಚ್ಚಿ ವಶಕ್ಕೆ ತೆಗೆದುಕೊಂಡಿದ್ದಾರೆ.

ಇದಕ್ಕೆ ಸಂಬಂಧಿಸಿ ಮೂಲತಃ ಮಹಾರಾಷ್ಟ್ರ ನಿವಾಸಿಗಳಾದ ಇಬ್ಬರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ಅವರ ಹೇಳಿಕೆಗಳನ್ನು ದಾಖಲಿಸಿ ಕೊಂಡಿದ್ದಾರೆ.

ಕಾಸರಗೋಡು ಪೊಲೀಸ್ ಠಾಣೆ ಪರಿಸರದಲ್ಲಿ ನಿನ್ನೆ ಸಂಜೆ ಪೊಲೀಸ್ ಕಾರ್ಯಾಚರಣೆ ನಡೆದಿದೆ. ನಗ-ನಗದು ಸಾಗಿಸುತ್ತಿದ್ದ ಬಗ್ಗೆ ಲಭಿಸಿದ ಗುಪ್ತ ಮಾಹಿತಿಯಂತೆ ಪೊಲೀಸರು ನಿನ್ನೆ ಸಂಜೆ ಠಾಣೆ ಪರಿಸರದಲ್ಲಿ ವಾಹನ ತಪಾಸಣೆಯಲ್ಲಿ ತೊಡಗಿದಾಗ ಆ ದಾರಿಯಾಗಿ ಬಂದ ಕಾರೊಂದನ್ನು ತಡೆದು ನಿಲ್ಲಿಸಿ ತಪಾಸಣೆಗೊಳಪಡಿಸಿ ದಾಗ ಅದರಲ್ಲಿ ಬೃಹತ್ ಪ್ರಮಾಣದ ಹಣ ಹಾಗೂ ಚಿನ್ನ ಪತ್ತೆಯಾಗಿದೆ. ಇದಕ್ಕೆ ಸಂಬಂಧಿಸಿ ಆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮೂಲತಃ ಮಹಾರಾಷ್ಟ್ರ ನಿವಾಸಿ ಹಾಗೂ ಹೊಸದುರ್ಗ ಕೋಟಚ್ಚೇರಿಯಲ್ಲಿ ವಾಸಿಸುತ್ತಿರುವ ತುಕಾರಾಂ ಮತ್ತು ಹೊಸದುರ್ಗ ಮೇಲಂಗೋಡಿನಲ್ಲಿ ವಾಸಿಸುತ್ತಿರುವ ರೋಹಿತ್ ಎಂಬವರನ್ನು ಕಸ್ಟಡಿಗೆ ತೆಗೆದು ಅವರ ಹೇಳಿಕೆಗಳನ್ನು ದಾಖಲಿಸಿಕೊಂ ಡಿದ್ದಾರೆ. ಹೀಗೆ ವಶಪಡಿಸಲಾದ ನಗ-ನಗದನ್ನು ನ್ಯಾಯಾಲಯದಲ್ಲಿ ಹಾಜರು ಪಡಿಸಲಾಗುವುದು. ಸರಿಯಾದ ದಾಖಲುಪತ್ರಗಳನ್ನು ಹಾಜರು ಪಡಿಸಿದಲ್ಲಿ ಅದನ್ನು ಸಾಗಿಸುತ್ತಿದ್ದವರಿಗೆ ಹಿಂತಿರುಗಿ ಲಭಿಸಲಿದೆ. ಇಲ್ಲವಾದಲ್ಲಿ ಅದು ಸರಕಾರಿ ಖಜಾನೆಗೆ ಸೇರಲಿದೆಯೆಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರು ಕಸ್ಟಡಿಗೆ ತೆಗೆದುಕೊಂಡ ಈ ಇಬ್ಬರು ಚಿನ್ನ ಮಾರಾಟ ಗಾರರಾಗಿರಬಹುದೆಂದೂ, ನಗರದ ಯಾವುದೋ ಚಿನ್ನದಂಗಡಿಯೊಂದಕ್ಕೆ ಚಿನ್ನ ಪೂರೈಸಿ ಅದರಂದ ಲಭಿಸಿದ ಹಣ ಇದಾಗಿರ ಬಹುದೆಂದು ಸಂಶ ಯಿಸಲಾಗುತ್ತಿದೆ. ಈ ಬಗ್ಗೆ ಎನ್‌ಫೋರ್ಸ್‌ಮೆಂಟ್ ವಿಭಾಗವೂ ತನಿಖೆ ನಡೆಸುವ ಸಾಧ್ಯತೆ ಇದೆ.

You cannot copy contents of this page