ಮಗನ ಸಾವಿನಿಂದ ಮನನೊಂದಿದ್ದ ತಂದೆ ಬಾವಿಗೆ ಹಾರಿ ಆತ್ಮಹತ್ಯೆ

ಕಾಸರಗೋಡು: ಪುತ್ರ ನೇಣುಬಿಗಿದು ಸಾವಿಗೀಡಾದ ಘಟನೆಯಿಂದ ತೀವ್ರವಾಗಿ  ನೊಂದು ಕೊಂಡಿದ್ದ ತಂದೆ ಬಾವಿಗೆ ಹಾರಿ ಆತ್ಮಹತ್ಯೆಗೈದ ಘಟನೆ ನಡೆದಿದೆ.   ಬೇಡಗಂ ಪೊಲೀಸ್ ಠಾಣೆ ವ್ಯಾಪ್ತಿಯ ಶಂಕರಂಪಾಡಿ ಕೊರಂಬಾರ ಎಂಬಲ್ಲಿನ ಎ. ಬಾಲಕೃಷ್ಣನ್ ನಾಯರ್ (70) ಸಾವಿಗೀಡಾದ ವ್ಯಕ್ತಿಯಾಗಿದ್ದಾರೆ.  ಬಾಲಕೃಷ್ಣನ್ ನಾಯರ್ ಬಾವಿಗೆ ಬಿದ್ದ ವಿಷಯ ತಿಳಿದು ತಲುಪಿದ ಅಗ್ನಿಶಾಮಕದಳ ಮೃತದೇಹವನ್ನು ಮೇಲಕ್ಕೆತ್ತಿದೆ. ಬಳಿಕ ಬೇಡಗಂ ಪೊಲೀಸರು ಮೃತದೇಹವನ್ನು ಪಂಚನಾಮೆ ನಡೆಸಿದ ಬಳಿಕ ಮರಣೋತ್ತರ ಪರೀಕ್ಷೆಗಾಗಿ ಕೊಂಡೊಯ್ಯಲಾಯಿತು. ಜನವರಿ 31ರಂದು ಬಾಲಕೃಷ್ಣನ್ ನಾಯರ್‌ರ ಪುತ್ರ ಮಣಿಕಂಠನ್ (47) ಅಡೂರು ಪಾಂಡಿ ಅರಣ್ಯದಲ್ಲಿ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಈ ಘಟನೆ ಬಳಿಕ ಬಾಲಕೃಷ್ಣನ್ ನಾಯರ್ ಭಾರೀ ಬೇಸರದಲ್ಲಿದ್ದರೆನ್ನಲಾ ಗಿದೆ. ಇದೇ ಕಾರಣದಿಂದ ಬಾವಿಗೆ ಹಾರಿ ಸಾವಿ ಗೀಡಾಗಿರಬಹುದೆಂದು ಸಂಶಯಿ ಸಲಾಗುತ್ತಿದೆ. ಬೇಡಗಂ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.   ಮೃತರು ಪತ್ನಿ ಸಾವಿತ್ರಿ, ಮಕ್ಕಳಾದ  ಶಾಂತಿ, ಜ್ಯೋತಿ, ಅಳಿಯಂದಿರಾದ ಚಂದ್ರನ್, ಮೋಹನ್, ಸೊಸೆ ರಮ್ಯ, ಸಹೋದರಿಯರಾದ ಶ್ಯಾಮಲ, ಕಸ್ತೂರಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. 

RELATED NEWS

You cannot copy contents of this page