ಕಾಸರಗೋಡು: ಯುವತಿ ಯೋರ್ವೆ ಪ್ರಿಯತಮನೊಂದಿಗೆ ಪರಾರಿಯಾಗಿರುವುದಾಗಿ ದೂರಲಾಗಿದೆ. ಈ ಬಗ್ಗೆ ತಂದೆ ನೀಡಿದ ದೂರಿನಂತೆ ವೆಳ್ಳರಿಕುಂಡ್ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಮಾಲೋಂ ಅದಿರುಮಾವು ಎಂಬಲ್ಲಿನ ಪಿ.ಕೆ. ಮಧು ಎಂಬವರ ಪುತ್ರಿ ಬೀನ (19) ಪ್ರಿಯತಮನಾದ ವೆಸ್ಟ್ ಎಳೇರಿ ಕೂಳಿಪ್ಪಾರದ ರಂಜಿತ್‌ನ ಜೊತೆ ತೆರಳಿರುವುದಾಗಿ ಹೇಳಲಾಗುತ್ತಿದೆ. ಬೀನ ತಾಯಿಯ ಸಹೋದರಿಯ ಕೂಳಿಪ್ಪಾರದ ಮನೆಯಲ್ಲಿ ವಾಸಿಸುತ್ತಿ ದ್ದರು. ಈಮಧ್ಯೆ ರಂಜಿತ್‌ನೊಂದಿಗೆ ಸ್ನೇಹದಲ್ಲಿದ್ದಳೆನ್ನಲಾಗಿದೆ. ನಿನ್ನೆ ಸಂಜೆ ೭ ಗಂಟೆ ವೇಳೆ ಅಲ್ಲಿನ ಮನೆಯಿಂದ ನಾಪತ್ತೆಯಾಗಿದ್ದಾಳೆಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಇದೇ ವೇಳೆ ಅವರಿಬ್ಬರು ಮದುವೆಯಾಗಿ ನ್ಯಾಯಾ ಲಯದಲ್ಲಿ ಹಾಜರಾಗಲಿದ್ದಾರೆಂಬ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿದೆ.






