ಹೊಸದುರ್ಗ: ನೀಲೇಶ್ವರದ ಆಟೋ ಚಾಲಕನಾದ ಯುವಕ ಮನೆ ಬಳಿ ನೇಣು ಬಿಗಿದು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಚಾಯೋತ್ ಶಾಲೆಯ ಸಮೀಪದ ನಿವಾಸಿಯಾದ ದಿ| ಅಂಬುಞಿ- ನಾರಾಯಣಿ ದಂಪತಿಯ ಪುತ್ರ ಕಾರಂಗೋಡ್ ದಿನೇಶ್ (41) ಮನೆ ಸಮೀಪದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಕಂಡು ಬಂದ ಯುವಕ. ನಿನ್ನೆ ಸಂಜೆ ಘಟನೆ ನಡೆದಿದೆ. ಅಸೌಖ್ಯ ತಗಲಿ ಕಳೆದ ಕೆಲವು ಸಮಯಗಳಿಂದ ಚಿಕಿತ್ಸೆಯಲ್ಲಿದ್ದರು. ಈ ಮನೋವೇದನೆಯಿಂದ ಆತ್ಮಹತ್ಯೆಗೈದಿರಬೇಕೆಂದು ಶಂಕಿಸಲಾಗಿದೆ. ಅವಿವಾಹಿತನಾಗಿದ್ದಾರೆ. ಮೃತರು ತಾಯಿ, ಸಹೋದರರಾದ ಪ್ರಕಾಶನ್, ಶ್ರೀಧರನ್, ಸಹೋದರಿಯರಾದ ಲಲಿತ, ಶೋಭ, ಚಂದ್ರಿಕ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.







