ಕಳೆದ ವಾರ ಗಲ್ಫ್‌ನಿಂದ ಊರಿಗೆ ಬಂದ ವ್ಯಕ್ತಿ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಪೆರ್ಲ: ಗಲ್ಫ್‌ನಿಂದ ಕಳೆದ ವಾರ ಊರಿಗೆ ಬಂದಿದ್ದ ವ್ಯಕ್ತಿ ಇಂದು ಬೆಳಿಗ್ಗೆ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಇಡಿಯಡ್ಕ ದೇವಸ್ಥಾನ ಬಳಿಯ ನಿವಾಸಿ ವೆಂಕಟ್ರಮಣ ಆಚಾರ್ಯ (58) ಮೃತಪಟ್ಟ ವ್ಯಕ್ತಿ. ನಿನ್ನೆ ರಾತ್ರಿ ಮನೆಯಲ್ಲಿ ಊಟಮಾಡಿ ನಿದ್ರಿಸಿದ್ದ ಇವರು ಇಂದು ಬೆಳಿಗ್ಗೆ ೫ ಗಂಟೆಗೆ ನಾಪತ್ತೆಯಾಗಿದ್ದರು. ಇದರಿಂದ ಮನೆಯವರು ಹುಡುಕಾಟ ನಡೆಸುತ್ತಿದ್ದಾಗ ಮನೆ ಬಳಿಯ ಮರದಲ್ಲಿ ವೆಂಕಟ್ರಮಣ ಆಚಾರ್ಯ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಬದಿಯಡ್ಕ ಪೊಲೀಸರು ಸ್ಥಳಕ್ಕೆ ತಲುಪಿ ಮೃತದೇಹದ ಪಂಚನಾಮೆ ನಡೆಸಿದ ಬಳಿಕ ಮರಣೋತ್ತರ ಪರೀ ಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.

ಗಲ್ಫ್‌ನಲ್ಲಿ ಟೈಲರಿಂಗ್ ವೃತ್ತಿ ನಡೆಸುತ್ತಿದ್ದ ವೆಂಕಟ್ರಮಣ  ಆಚಾರ್ಯ ಈ ತಿಂಗಳ ೧೯ರಂದು ಊರಿಗೆ ಬಂದಿದ್ದರು. ಸ್ವಲ್ಪ ದಿನಗಳ ಬಳಿಕ ಮತ್ತೆ ಗಲ್ಫ್‌ಗೆ ತೆರಳುವ ಬಗ್ಗೆ ತಿಳಿಸಿದ್ದರೆನ್ನಲಾಗಿದೆ. ಆದರೆ ಇವರು ನೇಣುಬಿಗಿದು ಸಾವಿಗೆ ಶರಣಾಗಲು ಕಾರಣವೇನೆಂದು ತಿಳಿದುಬಂದಿಲ್ಲ. ಇವರಿಗೆ ಪೆರ್ಲ ಕೆ.ಕೆ. ರಸ್ತೆಯಲ್ಲೂ ಟೈಲರಿಂಗ್ ಸಂಸ್ಥೆಯಿದೆಯೆನ್ನ ಲಾಗಿದೆ.

ದಿ| ಮಾಧವ ಆಚಾರ್ಯರ ಪುತ್ರನಾದ ಮೃತರು ತಾಯಿ ಚಂದ್ರಾವತಿ, ಪತ್ನಿ ಹೇಮಲತ, ಮಕ್ಕಳಾದ ತಶ್ವಿ, ಹಿಮಾನಿ, ಮಹರ್ಥ್, ಸಹೋದರರಾದ ಚಂದ್ರಶೇಖರ ಆಚಾರ್ಯ, ವಾಮನ  ಆಚಾರ್ಯ, ಸಹೋದರಿ ಶ್ಯಾಮಲ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page