ಕಾಸರಗೋಡು ನಗರದಲ್ಲಿ ಆರೋಗ್ಯ ಸಚಿವೆಯ ಪ್ರತಿಕೃತಿ ದಹಿಸಿ ಕೆಎಸ್‌ಯು ಪ್ರತಿಭಟನೆ

ಕಾಸರಗೋಡು: ನಿರಂತರ ಲೋಪಗಳು ಮಾತ್ರ ಸಂಭವಿಸುತ್ತಿರುವ ಆರೋಗ್ಯ ಇಲಾಖೆಯ ಆಡಳಿತ ಪರಾಜಯವನ್ನು ಮರೆಮಾಚಿ ಸುಳ್ಳು ಕತೆಗಳನ್ನು ಹಬ್ಬಿಸುತ್ತಿರುವ ಎಸ್‌ಎಫ್‌ಐ, ಡಿವೈಎಫ್‌ಐ ಕಾರ್ಯಕರ್ತರು ಕೇರಳವನ್ನು ಕಲಾಪಭೂಮಿಯನ್ನಾಗಿ ಮಾಡಲು ಸಚಿವೆ ವೀಣಾ ಜೋರ್ಜ್ ಯತ್ನಿಸುತ್ತಿರುವುದಾಗಿ ಕೆಎಸ್‌ಯು ಜಿಲ್ಲಾಧ್ಯಕ್ಷ ಜವಾದ್ ಪುತ್ತೂರು ಆರೋಪಿಸಿದರು. ಕಾಸರಗೋಡು ನಗರದಲ್ಲಿ ಕೆಎಸ್‌ಯು ಜಿಲ್ಲಾ ಸಮಿತಿ ನಡೆಸಿದ ಪ್ರತಿಭಟನಾ ಮೆರವಣಿಗೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪ್ರತಿಭಟನೆಯಲ್ಲಿ ಸಚಿವೆ ವೀಣಾ ಜೋರ್ಜ್‌ರ ಪ್ರತಿಕೃತಿಯನ್ನು ದಹಿಸಲಾಯಿತು. ಪೊಲೀಸರ ಸಹಾಯದೊಂದಿಗೆ ಕೆಎಸ್‌ಯು ಯೂತ್ ಕಾಂಗ್ರೆಸ್ ಕಾರ್ಯಕರ್ತರನ್ನು ಆಕ್ರಮಿಸಿ ಪಕ್ಷದ ಧ್ವಜ ಪತಾಕೆಗಳನ್ನು ಕಚೇರಿಗಳನ್ನು ನಾಶಪಡಿಸಲು ತೀರ್ಮಾನಿಸಿದ್ದರೆ ಅದನ್ನು ಎದುರಿಸಲು ಸಂಘಟನೆ ಸಿದ್ಧವೆಂದು ಕೆಎಸ್‌ಯು ಮುಖಂಡರು ಮುನ್ನೆಚ್ಚರಿಕೆ ನೀಡಿದ್ದಾರೆ. ಪದಾಧಿಕಾರಿಗಳಾದ ನೂಹ್‌ಮಾನ್, ಅನ್ಸಾರಿ, ಕೆ. ಮಣಿಕಂಠನ್, ಚಂದ್ರಕಲಾ, ಜಿಷ್ಣು, ಆದರ್ಶ್ ಸಹಿತ ಹಲವರು ಭಾಗವಹಿಸಿದರು.

You cannot copy contents of this page