ಕಾಸರಗೋಡು: ಚೆರ್ಕಳ-ಕಲ್ಲಡ್ಕ ರಾಜ್ಯ ಹೆದ್ದಾರಿಯ ಕೆಳಗಿನ ನೆಲ್ಲಿಕಟ್ಟೆ ಯಲ್ಲಿ ಸಂಭವಿಸಿದ ವಾಹನ ಅಪಘಾತ ದಲ್ಲಿ ಗಂಭೀರ ಗಾಯಗೊಂಡು ಚೆರ್ಕಳದ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆಯಲ್ಲಿದ್ದ ನೆಲ್ಲಿಕಟ್ಟೆ ನಿವಾಸಿ ಸಲ್ಮಾನ್ ಫಾರೀಸ್ (22) ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಸಾವನ್ನಪ್ಪಿದ್ದಾರೆ. ಇವರ ಜತೆಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಅವರ ತಂದೆ ಮಾಜಿ ಗಲ್ಫ್ ಉದ್ಯೋಗಿ ಶಂಸುದ್ದೀನ್ ಪೈಕ (68) ಅಪಘಾತ ನಡೆದ ಸ್ಥಳದಲ್ಲೇ ಸಾವನ್ನಪ್ಪಿದರು. ತಂದೆ ಮತ್ತು ಮಗ ಎರ್ನಾಕುಳಂನ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುವ ಸಂಬಂಧಿಕರೋರ್ವ ರನ್ನು ಕಾಣಲೆಂದು ಫೆಬ್ರವರಿ 21ರಂದು ಮುಂಜಾನೆ ಕಾರಿನಲ್ಲಿ ಕಾಸರಗೋಡು ರೈಲು ನಿಲ್ದಾಣಕ್ಕೆ ಬರುತ್ತಿದ್ದ ದಾರಿ ಮಧ್ಯೆ ನೆಲ್ಲಿಕಟ್ಟೆಗೆ ತಲುಪಿದಾಗ ಕಾಸರಗೋಡಿ ನಿಂದ ಪುತ್ತೂರಿಗೆ ಹೋಗುತ್ತಿದ್ದ ಕರ್ನಾಟಕ ರಾಜ್ಯ ರಸ್ತ್ತೆ ಸಾರಿಗೆ ನಿಗಮದ ಬಸ್ ಢಿಕ್ಕಿ ಹೊಡೆದಿತ್ತು. ಕಾರಿನಲ್ಲಿದ್ದ ಶಂಸುದ್ದೀನ್ ಘಟನೆ ನಡೆದ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಸಲ್ಮಾನ್ ಫಾರೀಸ್‌ನನ್ನು ಗಂಭೀರ ಗಾಯಗಳೊಂದಿಗೆ ಚೆರ್ಕಳದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಮೃತಪಟ್ಟಿದ್ದಾರೆ. ಮೃತರು ತಾಯಿ ರಹ್‌ಮತ್, ಸಹೋದರ-ಸಹೋದರಿ ಯರಾದ ರಾಶೀದ್, ಅರಾಫತ್, ಸಹದ್, ಫಾತಿಮಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾನೆ.






