ಪೆರಿಯ ಬಜಾರ್‌ನಲ್ಲಿ 3 ಗೂಡಂಗಡಿಗಳಿಗೆ ಕಿಚ್ಚು: ದುಷ್ಕರ್ಮಿಗಳು ತಲುಪಿದ್ದು ಬೈಕ್‌ನಲ್ಲೆಂಬ ಶಂಕೆ

ಕಾಸರಗೋಡು: ಪೆರಿಯ ಬಜಾರ್‌ನಲ್ಲಿ ಮೂರು ಗೂಡಂಗಡಿಗಳಿಗೆ ಕಿಚ್ಚಿರಿಸಲಾಗಿದೆ. ಪೆರಿಯ ಪೆಟ್ರೋಲ್ ಬಂಕ್ ಸಮೀಪದ ಮುಹಮ್ಮದ್ ಕುಂಞಿ, ನವೋದಯ ಶಾಲೆ ಸಮೀಪದ ಮುಹಮ್ಮದ್ ಕುಂಞಿ, ನವೋದಯ ನಗರ ಎಮಿನ್ ಶಾಲೆಯ ಸಮೀಪದ ಜಬ್ಬಾರ್ ಎಂಬಿವರ ಅಂಗಡಿಗಳಿಗೆ ಕಿಚ್ಚಿರಿಸಲಾಗಿದೆ. ಈ ಮೂರು ಅಂಗಡಿಗಳು ರಾಷ್ಟ್ರೀಯ ಹೆದ್ದಾರಿಯ ಎರಡು ಬದಿಗಳಲ್ಲಾಗಿ ವಿಭಿನ್ನ ಸ್ಥಳಗಳಲ್ಲಿದೆ. ಮಾಹಿತಿ ತಿಳಿದು ಬೇಕಲ ಪೊಲೀಸರು ಹಾಗೂ ಕಾಞಂಗಾಡ್‌ನಿಂದ ಅಗ್ನಿಶಾಮಕ ದಳ ತಲುಪಿ ಬೆಂಕಿ ನಂದಿಸಿದೆ.

ಸೀನಿಯರ್ ಫಯರ್ ಆಂಡ್ ರೆಸ್ಕ್ಯೂ ಅಧಿಕಾರಿ ಗಣೇಶ್, ಇ. ಶಿಜು, ಎ. ಅತುಲ್, ಚಾಲಕ ಪೃಥ್ವಿರಾಜ್, ಹೋಮ್‌ಗಾರ್ಡ್ ಗಳಾದ ಪಿ. ನಾರಾಯಣನ್, ಇ. ಸಂತೋಷ್ ಕುಮಾರ್ ಎಂಬಿವರು ರಕ್ಷಣಾ ಕಾರ್ಯ ನಡೆಸಿದರು. ಸಿಸಿ ಟಿವಿ ಕ್ಯಾಮರಾಗಳಲ್ಲಿ ಸೆರೆಯಾಗಿರುವ ದೃಷ್ಯಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಿಚ್ಚಿರಿಸಿದ ಪ್ರಕರಣದ ಹಿಂದೆ ಯಾರಾಗಿರಬಹುದೆಂದು ಸ್ಪಷ್ಟವಾಗಿಲ್ಲ. ಬೈಕ್‌ನಲ್ಲಿ ತಲುಪಿದವರು ಕಿಚ್ಚಿರಿಸಿರಬೇಕೆಂದು ಶಂಕಿಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

You cannot copy contents of this page