ಕುಂಬಳೆ: ಐಟಿಐಗೆ ಹೋದ ಬಳಿಕ ನಾಪತ್ತೆಯಾದ ವಿದ್ಯಾರ್ಥಿನಿ ಹಾಗೂ ಪ್ರಿಯತಮ ಪರಶ್ಶಿನಿಕಡವು ಕ್ಷೇತ್ರದಲ್ಲಿ ಮದುವೆಯಾಗಿ ದಾಂಪತ್ಯಕ್ಕೆ ಕಾಲಿರಿಸಿದ್ದಾರೆ. ನೀರ್ಚಾಲು ಮೆಣಸಿನಪಾರೆಯ ಪುಷ್ಪಲತಾ ಎಂಬವರ ಪುತ್ರಿ ಕೆ. ಯಜ್ಞಶ್ರೀ (20) ಹಾಗೂ ಕಾಸರಗೋಡು ನೆಲ್ಲಿಕುಂಜೆ ಓವರ್‌ಬ್ರಿಡ್ಸ್ ಸಮೀಪದ ಹಿತೇಶ್ ನಿನ್ನೆ ಮದುವೆಯಾಗಿದ್ದಾರೆ. ಈ ಇಬ್ಬರು ಇಂದು ಠಾಣೆಯಲ್ಲಿ ಹಾಜರಾಗುವುದಾಗಿ ತಿಳಿಸಿದ್ದಾರೆಂದು ಕುಂಬಳೆ ಪೊಲೀಸರು ತಿಳಿಸಿದ್ದಾರೆ.
ಸೀತಾಂಗೋಳಿ ಐಟಿಐಯ ವಿದ್ಯಾರ್ಥಿನಿಯಾದ ಯಜ್ಞಶ್ರೀ ಎಂದಿನಂತೆ ನಿನ್ನೆ ಬೆಳಿಗ್ಗೆ ಕಾಲೇಜಿಗೆ ತೆರಳಿದ್ದಳು. ಆದರೆ ತರಗತಿಗೆ ಹಾಜರಾಗದೆ ಕುಂಬಳೆ ರೈಲು ನಿಲ್ದಾಣಕ್ಕೆ ತಲುಪಿ ಕಣ್ಣೂರು ಭಾಗಕ್ಕಿರುವ ರೈಲಿನಲ್ಲಿ ಪ್ರಯಾಣಿಸಿ ರುವುದಾಗಿ ತಾಯಿ ಕುಂಬಳೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದರು. ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಂತೆ ಯಜ್ಞಶ್ರೀ ಹಾಗೂ ಹಿತೇಶ್‌ರ ಮದುವೆ ಪರಶ್ಶಿನಿಕಡವು ಕ್ಷೇತ್ರದಲ್ಲಿ ನಡೆದಿರುವ ಬಗ್ಗೆ ಮಾಹಿತಿ ಲಭಿಸಿ ದೆಯೆಂದು ಪೊಲೀಸರು ತಿಳಿಸಿದ್ದಾರೆ.






