ಉಪ್ಪಳ: ಐಲ ಶ್ರೀ ದುರ್ಗಾ ಪರಮೇಶ್ವರೀ ಕ್ಷೇತ್ರದಲ್ಲಿ ಕಳೆದ 25 ವರ್ಷಗಳಿಂದ ಧಾರ್ಮಿಕ, ಸಾಂಸ್ಕೃತಿಕ, ಸೇವೆ ಹಾಗೂ ಸಮಾಜಮುಖಿ ಕಾರ್ಯಕ್ರಮಗಳಿಂದ ತೊಡಗಿಸಿಕೊಂ ಡಿದ್ದ ಶ್ರೀ ದುರ್ಗಾ ಪರಮೇಶ್ವರೀ ಮಹಿಳಾ ಸಂಘದ ಬೆಳ್ಳಿಹಬ್ಬ ಇತ್ತೀಚೆಗೆ ಐಲ ಕ್ಷೇತ್ರ ಪರಿಸರದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ, ಸಭಾ ಕಾರ್ಯ ಕ್ರಮ ಗಳಿಂದೊಡಗೂಡಿ ನೆರವೇರಿತು. ಐಲ ಕ್ಷೇತ್ರದಲ್ಲಿ ಬೆಳಿಗ್ಗೆ ಗಣಹೋಮ, ಶ್ರೀ ದುರ್ಗಾ ಪರಮೇಶ್ವರೀ ಮಹಿಳಾ ಸಂಘದಿಂದ, ಕುಕ್ಕಾಡಿ ಶ್ರೀ ಭಗವತೀ ಮಹಿಳಾ ಸಂಘದ ಸದಸ್ಯೆಯರಿಂದ ಭಜನೆ ಸೇವೆ ನಡೆಯಿತು. ವೇದ ಮೂರ್ತಿ ಬ್ರಹ್ಮಶ್ರೀ ಹರಿನಾರಾಯಣ ಮಯ್ಯರ ಪೌರೋಹಿತ್ಯದಲ್ಲಿ ಶ್ರೀ ಲಲಿತ ಸಹಸ್ರನಾಮ ಹವನ ಹಾಗೂ ಶ್ರೀ ಲಲಿತ ಸಹಸ್ರನಾಮ ಪಾರಾಯಣ ಸಾಮೂಹಿಕವಾಗಿ ಮಾತೆಯರಿಂದ ನೆರವೇರಿತು. ಸಾಯಂಕಾಲ ಕ್ಷೇತ್ರದ ಮುಂಭಾಗದ ವೇದಿಕೆಯಲ್ಲಿ ರಜತ ನೃತ್ಯ ಸಿಂಚನ ನೃತ್ಯ ಪ್ರದರ್ಶನ ನೃತ್ಯ ಅಧ್ಯಾಪಿಕೆ ವಿನುತಾ ಎಸ್. ರವರ ನಿರ್ದೇಶನದಲ್ಲಿ ನೆರವೇರಿತು. ಐಲ ಕ್ಷೇತ್ರದ ಆಡಳಿತ ಮೋಕ್ತೇಸರ ಕೋಡಿ ಬೈಲು ನಾರಾಯಣ ಹೆಗ್ಡೆಯವರ ಅಧ್ಯಕ್ಷತೆಯಲ್ಲಿ ಸಭೆ ಜರಗಿತು.
ಶ್ರೀ ಸಾಯಿ ಸೇವಾಶ್ರಮ ದೈಗೋಳಿ ಇದರ ವ್ಯವಸ್ಥಾಪಿಕೆ ಡಾ. ಶಾರದಾ ಉದಯ ಕುಮಾರ್, ಭಾರತೀಯ ಜನತಾ ಪಕ್ಷದ ಜಿಲ್ಲಾ ಅಧ್ಯಕ್ಷೆ ಅಶ್ವಿನಿ ಎಂ. ಎಲ್., ಮಂಗ ಲ್ಪಾಡಿ ಪಂಚಾಯತ್ ಸದಸ್ಯೆ ಸಾಕ್ಷಿ ಶೆಟ್ಟಿ ಶುಭ ಹಾರೈಸಿದರು. ಮಹಿಳಾ ಸಂಘದ ಉಪಾಧ್ಯಕ್ಷೆ ಜಲಜಾಕ್ಷಿ ಟೀಚರ್, ಚಲನಚಿತ್ರ ನಟ ಪೃಥ್ವಿ ಅಂ ಬಾರ್ ಉಪಸ್ಥಿತರಿದ್ದರು. ಮಹಿಳಾ ಸಂಘದ ಸದಸ್ಯೆಯರಿಗೆ ವಿವಿಧ ಸಾಂಸ್ಕೃತಿಕ ಕಲೆಗಳನ್ನು ಪ್ರಸ್ತುತ ಪಡಿಸಲು ನೆರವಾದ ಗುರುಗಳಿಗೆ ಗುರುವಂದನೆ ನಡೆಯಿತು. ಕಲಾ ರತ್ನ ಶಂ.ನಾ.ಅಡಿಗ ಕುಂಬಳೆ, ಯಕ್ಷ ಸಿರಿ ಪುರಸ್ಕೃತ ರಾಮ ಸಾಲ್ಯಾನ್ ಮಂಗಲ್ಪಾಡಿ, ಸಂಕೀರ್ತನಕಾರ ಜಯಾನಂದ ಹೊಸದುರ್ಗ ಇವರು ಗುರುವಂದನೆಗೆ ಭಾಜನರಾದರು. ರೋಹಿಣಿ ಸುಂದರ, ನಿಶಾರೇಖಾ ಮನೋಜ್ ಹಾಗೂ ಲಕ್ಷ್ಮಿ ಚಂದ್ರಹಾಸ ಕಿರು ಪರಿಚಯ ನಡೆಸಿದರು. ಇದೇ ವೇಳೆ ಬೆಳ್ಳಿ ಹಬ್ಬದ ಪ್ರಯುಕ್ತ ನಡೆಸಿದ್ದ ರಂಗೋಲಿ ಸ್ಪರ್ಧೆಗಳ ಬಹುಮಾನವನ್ನು ವಿಜೇತರಿಗೆ ನೀಡಲಾಯಿತು. ಬೆಳ್ಳಿ ಹಬ್ಬ ಆಚರಿಸುತ್ತಿರುವ ಶ್ರೀ ದುರ್ಗಾ ಪರಮೇಶ್ವರೀ ಮಹಿಳಾ ಸಂಘ ನಡೆದು ಬಂದ ದಾರಿಯನ್ನು ಪ್ರಸ್ತಾಪಿಸಿ, ಪದ್ಮಾ ಮೋಹನ್ ದಾಸ್ ಸ್ವಾಗತಿಸಿದರು. ಮಹಿಳಾ ಸಂಘದ ಸದಸ್ಯೆ ಯರಾಗಿದ್ದು ದಿವಂಗತರಾದ ವಸಂತಿ ಐಲ, ಸುಜಾತ ಅಂಬಾರು, ರಾಜೀವಿ ಪೆರಿಂಗಡಿ ಯವರಿಗೆ ಧನಲಕ್ಷ್ಮೀ ಕಮಲ್ ಶ್ರದ್ದಾಂಜಲಿ ಸಮರ್ಪಿಸಿದರು. ಹರ್ಷಿಣಿ ಕುಂಬಳೆ ವಂದಿಸಿದರು. ತರುಣ ಕಲಾವೃಂದದ ಸದಸ್ಯ ಕಮಾಲಾಕ್ಷ ಐಲ ನಿರೂಪಿಸಿದರು. ಕಲಾಸಂಗಮ ಮಂಗಳೂರು ರವರ ಶಿವದೂತೆ ಗುಳಿಗೆ ನಾಟಕ ಪ್ರದರ್ಶಿಸಲಾಯಿತು.







