ಕಾಸರಗೋಡು: ವಿಧಾನಸಭೆಗೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಖಾತರಿಪಡಿಸುವ ಸಲುವಾಗಿ ಪೊಲೀಸರು ಜಿಲ್ಲೆಯಾ ದ್ಯಂತ ಆರಂಭಿಸಿದ ಕಾರ್ಯಾಚ ರಣೆಯಲ್ಲಿ ಚೌಕಿಯ ಕ್ವಾರ್ಟರ್ಸ್‌ವೊಂದರಿಂದ ನಾಲ್ಕು ಕಿಲೋ ಗಾಂಜಾ ಪತ್ತೆಹಚ್ಚಿ ವಶಪಡಸಿದ್ದಾರೆ.
ಮೂಲತಃ ಉತ್ತರಪ್ರದೇಶ ಬಲಿಯಾಪಿಪ್‌ರೋಲಿ ನಿವಾಸಿ ಹಾಗೂ ಈಗ ಕೂಡ್ಲು ಚೌಕಿ ಕಾವುಗೋಳಿ ರೈಲ್ವೇ ಲೈನ್ ಬಳಿಯ ಬಾಡಿಗೆ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿರುವ ಸುನಿಲ್ ಪ್ರಸಾದ್ (41) ಎಂಬಾತನನ್ನು ಇದಕ್ಕೆ ಸಂಬಂಧಿಸಿ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೀಡಿದ ನಿರ್ದೇಶ ಪ್ರಕಾರ ಕಾಸರಗೋಡು ಎಎಸ್‌ಪಿ ಅಚ್ಯುತ್ ಅಶೋಕ್ ನೇತೃತ್ವದಲ್ಲಿ ಕಾಸರಗೋಡು ಠಾಣೆಯ ಎಸ್‌ಐ ಮೌಸಮಿ ಸಿ.ಆರ್, ಪ್ರೊಬೆಶನರಿ ಎಸ್‌ಐ ಪ್ರಜಿತ್ ಮತ್ತು ಇತರ ಪೊಲೀಸ್ ಸಿಬ್ಬಂದಿಗಳಾದ ನೀರಜ್, ಅಭಿಲಾಷ್, ಜೈಮ್ಸ್, ನಿಜಿನ್ ಕುಮಾರ್, ರಾಜೀವ್ ಕಾಟ್ಟಾಂಬಳ್ಳಿ ಅನೀಶ್ ಕುಮಾರ್, ಭಕ್ತಶೇಖರನ್ ಎಂಬವರನ್ನೊಳಗೊಂಡ ಪೊಲೀಸರತಂಡ ಈ ಕಾರ್ಯಾಚರಣೆ ನಡೆಸಿದೆ. ಈ ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಜಿಲ್ಲಾ ಮಾದಕದ್ರವ್ಯ, ಪತ್ತೆದಳದವರೂ ಒಳಗೊಂಡಿದ್ದರು.






