ತಲೆಹೊರೆ ಕಾರ್ಮಿಕರ ಕನಿಷ್ಠ ಪಿಂಚಣಿ 5000 ರೂ.ಗೇರಿಸಬೇಕು-ಬಿಎಂಎಸ್

ಕಾಸರಗೋಡು: ತಲೆಹೊರೆ ಕಾರ್ಮಿಕರಿಗೆ ಕನಿಷ್ಠ ಪಿಂಚಣಿ 5000 ರೂಪಾಯಿಗೇರಿಸಬೇಕೆಂದು ಹೆಡ್ ಲೋಡ್ ಆಂಡ್ ಜನರಲ್ ಮಜ್ದೂರ್ ಸಂಘ್ (ಬಿಎಂಎಸ್) ಜಿಲ್ಲಾ ಸಮ್ಮೇಳನ ಒತ್ತಾಯಿಸಿದೆ. ಉಳಿಯತ್ತಡ್ಕದ ಶಕ್ತಿ ಸಭಾ ಭವನದಲ್ಲಿ ನಡೆದ ಸಮ್ಮೇಳನವನ್ನು ಫೆಡರೇಶನ್ ರಾಜ್ಯ ಅಧ್ಯಕ್ಷ ಕೆ. ಜಯಕುಮಾರ್ ಉದ್ಘಾಟಿಸಿದರು. ಜಿಲ್ಲಾಧ್ಯಕ್ಷ ಕೆ.ವಿ. ಬಾಬು ಅಧ್ಯಕ್ಷತೆ ವಹಿಸಿದರು. ರಾಜ್ಯ ಉಪಾಧ್ಯಕ್ಷ ಪಿ. ಮುರಳೀಧರನ್, ಉಪೇಂದ್ರನ್ ಕೋಟೆಕಣಿ ಮಾತನಾಡಿದರು.

ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು. ಜಿಲ್ಲಾಧ್ಯಕ್ಷರಾಗಿ ಭಾಸ್ಕರನ್ ಚೆಂಬಿಲೋಟ್, ಸದಾಶಿವನ್ ಮುಳ್ಳೇರಿಯ, ತಂಗಚ್ಚನ್ ಪಾಣತ್ತೂರು, ಅನೀಶ್ ಪರಕ್ಕಳಾಯಿ, ಪ್ರಧಾನ ಕಾರ್ಯದರ್ಶಿಯಾಗಿ ದಿನೇಶ್ ಬಂಬ್ರಾಣ, ಕಾರ್ಯದರ್ಶಿಗಳಾಗಿ ಪುನೀತ್ ಮಾನ್ಯ, ರಂಜಿತ್ ಚೆರ್ಕಳ, ಜಿತಿನ್‌ಬಾಬು ನೀಲೇಶ್ವರ, ಉಮೇಶ್ ಮಾನ್ಯ, ನಾರಾಯಣನ್ ಪರವನಡ್ಕ, ಕೋಶಾಧಿಕಾರಿಯಾಗಿ ರವಿ ಬದಿಯಡ್ಕ ಹಾಗೂ 11 ಮಂದಿಯ ಕಾರ್ಯಕಾರಿ ಸಮಿತಿಯನ್ನು ಆರಿಸಲಾಯಿತು.  ಕಲಾ, ಕ್ರೀಡೆ, ಶಿಕ್ಷಣ ರಂಗಗಳಲ್ಲಿ ಉನ್ನತ ಸಾಧನೆ ಮಾಡಿದ ಕಾರ್ಮಿಕರ ಮಕ್ಕಳನ್ನು ಗೌರವಿಸಲಾಯಿತು. ಪ್ರಧಾನ ಕಾರ್ಯ ದರ್ಶಿ ದಿನೇಶ್ ಬಂಬ್ರಾಣ ಸ್ವಾಗತಿಸಿ, ಸದಾಶಿವನ್ ಮುಳ್ಳೇರಿಯ ವಂದಿಸಿದರು.

RELATED NEWS

You cannot copy contents of this page