ಕುಂಬ್ಡಾಜೆ: ಮುನಿಯೂರು ಮುನಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ನವೀಕರಣ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಭಾನುವಾರ ಬೆಳಿಗ್ಗೆ ಮಹಾಗಣಪತಿ ಹೋಮದೊಂದಿಗೆ ಆರಂಭಗೊಂಡಿತು. ಉಗ್ರಾಣ ಮುಹೂರ್ತ, ಬೊಳ್ಳೂರು ಶ್ರೀ ಸದಾಶಿವ ದೇವಸ್ಥಾನದಿಂದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ಜರಗಿತು. ಇಂದು ಬೆಳಿಗ್ಗೆ ಗಣಪತಿ ಹೋಮ, ಶಾಂತಿಹೋಮ, ವಿವಿಧ ವೈದಿಕ ಕಾರ್ಯಕ್ರಮಗಳು, ಮಧ್ಯಾಹ್ನ ಮಹಾಪೂಜೆ ಜರಗಿತು. ಸಂಜೆ 7ರಿಂದ ಹೋಮ ಕಲಶಾಭಿಷೇಕ, ಅಂಕುರಪೂಜೆ ಸಹಿತ ವಿವಿಧ ವೈದಿಕ ಕಾರ್ಯಕ್ರಮ ಗಳು, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಂಜೆ 6.30ರಿಂದ ನಂದನ್ ಶರ್ಮ ಪಂಜಿತ್ತಡ್ಕ, ಇಶಾನಿ ಭಟ್ ಹೊರಂಗಳ, ಚಿರಾಗ್ ಕೃಷ್ಣ ವಾಶೆ, ಸುನಾದ ಸಂಗೀತ ಕಲಾಶಾಲೆಯ ವಾಣಿಪ್ರಸಾದ್ ಕಬೆಕ್ಕೋಡು ಇವರಿಂದ ಶಾಸ್ತ್ರೀಯ ಸಂಗೀತ, ಟೀಮ್ ರಾಧಾ ಮಾಧವಂ ಮುನಿಯೂರು ಇವರಿಂದ ತಿರುವಾದಿರ ಕಳಿ ನಡೆಯಲಿದೆ. ದೇವಸ್ಥಾನದ ಬ್ರಹ್ಮ ಕಲಶೋತ್ಸವದ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಉದ್ಘಾಟಿಸಿ ಆಶೀರ್ವಚನ ನೀಡಿದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶಂಕರ ನಾರಾಯಣ ಮಯ್ಯ ಅಧ್ಯಕ್ಷತೆ ವಹಿಸಿ ದರು. ಆಡಳಿತ ಮೊಕ್ತೇಸರ ಹರಿನಾರಾಯಣ ನಡುವಂತಿ ಲ್ಲಾಯ, ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿ, ದೈವಜ್ಞ ವಿಶ್ವನಾಥ ಭಟ್ ಕೊಳಚಪ್ಪೆ ಸಹಿತ ಹಲವು ಮಂದಿ ಗಣ್ಯರು ಭಾಗವಹಿಸಿದರು.






