ಕುಂಬಳೆ: ಶೇಡಿಗದ್ದೆ ಮುಂಗಿಲ ನಾರಾಯಣಮಂಗಲ ಕಾಂಕ್ರೀಟ್ ರಸ್ತೆಯನ್ನು ನಾಡಿಗೆ ಸಮರ್ಪಿಸ ಲಾಯಿತು. ಕಾಸರಗೋಡು ಬ್ಲೋಕ್ ಪಂಚಾಯತ್ನ ವಾರ್ಷಿಕ ಯೋಜನೆಯಲ್ಲಿ ಸೇರಿಸಿ ನವೀಕರಿಸಿದ ಕುಂಬಳೆ ಪಂಚಾಯತ್ ವ್ಯಾಪ್ತಿಯ ಈ ರಸ್ತೆಯನ್ನು ಶಾಸಕ ಎ.ಕೆ.ಎಂ. ಅಶ್ರಫ್ ನಾಡಿಗೆ ಸಮರ್ಪಿಸಿದರು.
ಬ್ಲೋಕ್ ಪಂಚಾಯತ್ ಅಧ್ಯಕ್ಷ ಅಬ್ದುಲ್ಲ ಕುಂಞಿ ಚೆರ್ಕಳ ಅಧ್ಯಕ್ಷತೆ ವಹಿಸಿದರು. ಬ್ಲೋಕ್ನ ಸ್ಥಾಯೀ ಸಮಿತಿ ಅಧ್ಯಕ್ಷ ಅಶ್ರಫ್ ಕಾರ್ಲೆ ಸ್ವಾಗತಿಸಿದರು. ಕುಂಬಳೆ ಪಂಚಾಯತ್ ಅಧ್ಯಕ್ಷ ಪಿ. ಅಬ್ದುಲ್ ಖಾದರ್ , ಜಿಲ್ಲಾ ಪಂ. ಸದಸ್ಯ ಅಸೀಸ್ ಕಳತ್ತೂರು, ಮಂಜೇಶ್ವರ ಬ್ಲೋಕ್ ಪಂ. ಸದಸ್ಯ ಅಸೀಸ್ ಮರಿಕ್ಕೆ, ಕುಂಬಳೆ ಪಂ. ಸದಸ್ಯರಾದ ಎ.ಕೆ. ಆರೀಫ್, ಶಾರದ, ಪುರುಷೋತ್ತಮನ್ ಮಾತನಾಡಿದರು. ಬಿ.ಎನ್. ಮುಹಮ್ಮದಲಿ, ರವಿ ಪೂಜಾರಿ, ಸಂದೀಪ್ ಗ್ರೇಸ್ತ, ರತೀಶ್, ಮಹೇಶ್ ಭಟ್, ನವೀನ್, ಸಂದೀಪ್ ಡಿ’ಸೋಜ, ಸಿದ್ದೀಕ್ ದಂಡೆಗೋಳಿ ಭಾಗವಹಿಸಿದರು. ಅಬ್ದುಲ್ಲ ವಂದಿಸಿದರು.







