ಕಾನ ಮಠದಲ್ಲಿ ದೇವಕಾರ್ಯ, ಶ್ರೀ ಧೂಮಾವತೀ ದೈವದ ಕೋಲ
ಕುಂಬಳೆ: ಕಾನ ಶ್ರೀ ಶಂಕರನಾರಾಯಣ ದೇವರ ಮಠದಲ್ಲಿ ಹೊಸ್ತಿನ ದೇವಕಾರ್ಯ ಮತ್ತು ಶ್ರೀ ಧೂಮಾವತೀ ದೈವದ ಪುದ್ವಾರು ಕೋಲ ಈ ತಿಂಗಳ 27, 28ರÀಂದು ಜರಗಲಿರುವುದು. 26ರÀಂದು ಬೆಳಗ್ಗೆ 7 ಗಂಟೆಗೆ ಧೂಮಾವತೀ ಸನ್ನಿದಿsಯಲ್ಲಿ ಆಚಾರ್ಯರಿಂದ ಪಂಚಗವ್ಯ ಹವನ, ಕಲಶಾಭಿಷೇಕ, 10 ಗಂಟೆಗೆ ಶ್ರೀ ಶಂಕರನಾರಾಯಣ ದೇವರ ಸನ್ನಿಯಲ್ಲಿ ಕೊಪ್ಪರಿಗೆ ಮುಹೂರ್ತ. 27ರÀಂದು ಬೆಳಗ್ಗೆ 6.30ಕ್ಕೆ ಆಚಾರ್ಯರಿಂದ ಗಣಪತಿ ಹೋಮ, ಪಂಚಗವ್ಯ ಹೋಮ, ನವಕಾಭಿಷೇಕ, 8 ಗಂಟೆಗೆ ಸಾಮೂಹಿಕ ರುದ್ರ ಪಾರಾಯಣ, 10.30ಕ್ಕೆ ತುಲಾಭಾರ ಸೇವೆ, 11 ಗಂಟೆಗೆ ಮಹಾಪೂಜೆ, ಸಂತರ್ಪಣ. ಸಂಜೆ 6.30ಕ್ಕೆ ಕಾವಿ ಸುಬ್ರಹ್ಮಣ್ಯ ಯಕ್ಷ ಬಳಗ ವರ್ಕಾಡಿ ಇವರಿಂದ ಇಂದ್ರಜಿತು ಕಾಳಗ ತಾಳಮದ್ದಳೆ. ರಾತ್ರಿ 7.30ಕ್ಕೆ ಭಂಡಾರ ಮನೆಯಿಂದ ಶ್ರೀ ಧೂಮಾವತೀ ದೈವದ ಭಂಡಾರ ಹೊರಟು ದೈವಸ್ಥಾನದಲ್ಲಿ ತಂಬಿಲ ಮುಗಿಸಿ ಶ್ರೀ ಶಂಕರನಾರಾಯಣ ದೇವರ ಮಠಕ್ಕೆ ಆಗಮನ, ದೇವರಿಗೆ ಮಹಾಪೂಜೆ, ಶ್ರೀ ಧೂಮಾವತೀ ದೈವದ ಆರಂಭ, 27ರÀಂದು ಬೆಳಗ್ಗೆ 9.30ಕ್ಕೆ ಶ್ರೀ ಧೂಮಾವತೀ ದೈವದ ಕೋಲ ನಡೆಯಲಿದೆ ಎಂದು ಮೇಣ ರಾಮಕೃಷ್ಣ ಭಟ್ ತಿಳಿಸಿದ್ದಾರೆ.