ನೇರೋಳು ನಿವಾಸಿ ಲಲಿತ ಎನ್. ಭಟ್ ನಿಧನ

ಪೆರ್ಲ: ಎಣ್ಮಕಜೆ ಪಂ. ವ್ಯಾಪ್ತಿಯ ಅಡ್ಕಸ್ಥಳ ಸಮೀಪದ ನೇರೋಳು ನಿವಾಸಿ, ಹಿರಿಯ ಆರ್‌ಎಸ್‌ಎಸ್ ಕಾರ್ಯಕರ್ತ, ಯಕ್ಷಗಾನ ಹಿಮ್ಮೇಳ ವಾದಕರಾಗಿದ್ದ ದಿ| ರಾಮ್ ಭಟ್‌ರ ಪತ್ನಿ ಲಲಿತ ಎನ್. ಭಟ್ (74) ನಿಧನ ಹೊಂದಿದರು. ಅಸೌಖ್ಯ ನಿಮಿತ್ತ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಮೃತರು ಮಕ್ಕಳಾದ ಪದ್ಮಶೇಖರ ಎನ್. (ಬಿಜೆಪಿ ಕುಂಬಳೆ ಮಂಡಲ ಸದಸ್ಯ), ಮಮತ ಪುದುಕೋಳಿ, ಅಳಿಯಂದಿರಾದ ನರಸಿಂಹ ಭಟ್ ಕುರುವೇರಿ, ಶಿವಶಂಕರ ಭಟ್ ಪುದುಕೋಳಿ, ಸಹೋದರಿ ಯರಾದ ಸರಸ್ವತಿ ಭಟ್, ಕಲಾವತಿ ಭಟ್, ಕುಸುಮಾವತಿ ಭಟ್, ವಸಂತಿ ಭಟ್ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಓರ್ವ ಪುತ್ರಿ ಸುಚೇತ, ಸಹೋದರ ಕೃಷ್ಣ ಭಟ್ ಪೂವಾಳೆ ಈ ಹಿಂದೆ ನಿಧನರಾಗಿದ್ದಾರೆ.

RELATED NEWS

You cannot copy contents of this page