ಲಾರಿ ಚಾಲಕ ವಿಷ ಸೇವಿಸಿ ಮೃತ್ಯು

ಕುಂಬಳೆ: ಮದ್ಯ ಸೇವಿಸಿ ವಾಹನ ಚಲಾಯಿಸಿದ ಆರೋಪದಂತೆ ಪೊಲೀಸರು ನೋಟೀಸು ನೀಡಿ ಬಿಡುಗಡೆಗೊಳಿಸಿದ ಬೆನ್ನಲ್ಲೇ ಲಾರಿ ಚಾಲಕ ವಿಷ ಸೇವಿಸಿ ಮೃತಪಟ್ಟ ಘಟನೆ ನಡೆದಿದೆ. ಪುತ್ತಿಗೆ ಕಟ್ಟತ್ತಡ್ಕ ಎಕ್ಸ್‌ಚೇಂಜ್ ರಸ್ತೆಯ ವಸಂತ ನಾಯ್ಕ್‌ರ ಪುತ್ರ ಪ್ರವೀಣ್ ಕುಮಾರ್ (35 ಮೃತಪಟ್ಟ ವ್ಯಕ್ತಿಯಾಗಿದ್ದಾರೆ.

ನಿನ್ನೆ ಮುಂಜಾನೆ ಮನೆಯಲ್ಲಿ ಇವರು ವಿಷ ಸೇವಿಸಿ  ತೀವ್ರ ಅಸ್ವಸ್ಥಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿ ದ್ದರು. ಕೂಡಲೇ ಆಸ್ಪತ್ರೆಗೆ ತಲುಪಿಸಿ ದರೂ ಜೀವ ರಕ್ಷಿಸಲಾಗಲಿಲ್ಲ.  ಮಂಗಳೂರಿನ ಕೋಳಿ ಫಾರ್ಮ್ ವೊಂದರ ಲಾರಿಯ ಚಾಲಕನಾಗಿ ಇವರು ಕೆಲಸ ನಿರ್ವಹಿಸುತ್ತಿದ್ದರು.

ಮೊನ್ನೆ ರಾತ್ರಿ ಕೆಲಸ ಮುಗಿಸಿ ಬೈಕ್‌ನಲ್ಲಿ ಮನೆಗೆ ಮರಳುತ್ತಿದ್ದ ವೇಳೆ ಕುಂಬಳೆಯಲ್ಲಿ ಪೊಲೀಸರು ತಪಾಸಣೆ ನಡೆಸಿದ್ದರು.  ಈ ವೇಳೆ ಮದ್ಯ ಸೇವಿಸಿದ್ದರೆಂಬ ಕಾರಣಕ್ಕೆ ಅವರಿಗೆ ಪೊಲೀಸರು ನೋಟೀಸು ನೀಡಿ ಕಳುಹಿಸಿದ್ದರು. ಆದರೆ ಇದೇ ಕಾರಣದಿಂದ ಪ್ರವೀಣ್ ಕುಮಾರ್ ವಿಷಸೇವಿಸಿದ್ದಾರೆಯೇ ಎಂಬುವುದು ಸ್ಪಷ್ಟಗೊಂಡಿಲ್ಲ. ಇವರಿಗೆ ಮಂಗಳೂ ರಿನ ಸಂಸ್ಥೆಯಲ್ಲಿ   ಆರ್ಥಿಕ ಬಾಧತೆ ಇರುವುದಾಗಿ ಹೇಳಲಾಗುತ್ತಿದೆ. ಘಟನೆ ಬಗ್ಗೆ ಕುಂಬಳೆ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮೃತರು ತಂದೆ, ತಾಯಿ ಗೀತಾ, ಸಹೋದರರಾದ ಶಶಿ ಕುಮಾರ್, ನವೀನ್ ಕುಮಾರ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page