ಬಾವಿಗೆ ಬಿದ್ದು ಮಹಿಳೆ ಮೃತ್ಯು

ಉಪ್ಪಳ: ಮಹಿಳೆಯೊಬ್ಬರು ಬಾವಿಗೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಮಂಜೇಶ್ವರ ಚಕ್ಕಿಗುಡ್ಡೆ ನಿವಾಸಿ ಚಂದ್ರಹಾಸರ ಪತ್ನಿ ಗೀತಾ (53) ಮೃತಪಟ್ಟ ದುರ್ದೈವಿಯಾ ಗಿದ್ದಾರೆ.  ನಿನ್ನೆ  ಮಧ್ಯಾಹ್ನ 12 ಗಂಟೆ ವೇಳೆ ಇವರು ಬಾವಿಯಲ್ಲಿ ಬಿದ್ದಿರುವುದನ್ನು ಸ್ಥಳೀಯರು ಕಂಡಿದ್ದು, ಕೂಡಲೇ ಅಗ್ನಿಶಾಮಕದಳಕ್ಕೆ ಮಾಹಿತಿ ನೀಡಿದರು. ಉಪ್ಪಳದಿಂದ ಅಗ್ನಿಶಾಮಕದಳ ತಲುಪಿ ಗೀತಾರನ್ನು ಬಾವಿಯಿಂದ ಮೇಲಕ್ಕೆತ್ತಿ ಮಂಗಲ್ಪಾಡಿ ಆಸ್ಪತ್ರೆಗೆ ತಲುಪಿಸಿದರೂ ಅಷ್ಟರೊಳಗೆ ಸಾವು ಸಂಭವಿಸಿತ್ತೆನ್ನಲಾಗಿದೆ. ನಿನ್ನೆ ಪತಿ ಹಾಗೂ ಮಕ್ಕಳು ಕೆಲಸಕ್ಕೆ ತೆರಳಿದ್ದು, ಮನೆಯಲ್ಲಿ ಗೀತಾ ಮಾತ್ರವೇ ಇದ್ದರು. ಬಾವಿಗೆ ಬೀಳಲು ಕಾರಣವೇನೆಂದು ಸ್ಪಷ್ಟಗೊಂಡಿಲ್ಲ.  ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಘಟನೆ ಬಗ್ಗೆ ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮೃತರು ಪತಿ, ಮಕ್ಕಳಾದ ಪ್ರಜ್ವಲ್, ತೃಶಾಲ್, ರಾಹುಲ್ ಹಾಗೂ ಸಹೋದರ-ಸಹೋದರಿ ಯರ ಸಹಿತ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page