ಪುತ್ತಿಗೆಯಲ್ಲಿ  ವಿರಾಟ್ ಹಿಂದೂ ಸಂಗಮ: ಶ್ರೀ ಆನಂದವನ ಭಾರತೀ ಸ್ವಾಮೀಜಿಯವರಿಂದ ಆಶೀರ್ವಚನ

ಸೀತಾಂಗೋಳಿ : ಭಾರತದ ನಾಗಸಾಧುಗಳ ಪಂಥ (ಅಖಾಡ) ಗಳಲ್ಲಿ ಅತ್ಯಂತ ಪ್ರಾಚೀನ ಹಾಗೂ 13 ಪಂಥಗಳಲ್ಲಿಯೇ ಅತ್ಯಂತ ಪ್ರಬಲ ಹಾಗೂ ಮೊದಲ ಪಂಥವಾದ ‘ಜೂನಾ ಪಂಥದ’ ಮಹಾ ಮಂಡಲೇಶ್ವರ ಶ್ರೀ ಆನಂದವನ ಭಾರತಿ ಸ್ವಾಮೀಜಿ ಮಾ.8ರಂದು ಪುತ್ತಿಗೆಗೆ ಆಗಮಿಸಲಿದ್ದಾರೆ.
ಸುಮಾರು 271 ವರ್ಷಗಳ ಹಿಂದೆ ಬ್ರಿಟಿಷರು ನಿಲುಗಡೆಗೊಳಿಸಿದ ಮಲಪ್ಪುರಂನ ಭಾರತಹೊಳೆಯ ತೀರದಲ್ಲಿ ತಿರುನಾವಾಯ ಎಂಬಲ್ಲಿನ ಶ್ರೀ ಮುಕುಂದೇಶ್ವರ ದೇವಾಲಯದಲ್ಲಿ ‘ಮಹಾಮಾ ಮಾಂಕಂ’ ಅಥವಾ ಕೇರಳದ ಕುಂಭಮೇಳನ್ನು ಮರು ಆರಂ ಭಿಸಿದ ಸ್ವಾಮೀಜಿ ಎನ್ನುವ ಗೌರವನ್ನು ಹೊಂದಿರುವ ಇವರ ಮೊದಲ ಸಾರ್ವಜನಿಕ ಸಮಾರಂಭವಾಗಿದೆ ಪುತ್ತಿಗೆಯಲ್ಲಿ ಜರಗಲಿರುವ ವಿರಾಟ್ ಹಿಂದು ಸಂಗಮ. ಕಾರ್ಯಕ್ರಮದಲ್ಲಿ ಸ್ವಾಮೀಜಿ ಆಶೀರ್ವಚನ ನೀಡಲಿ ರುವರು.
ಶ್ರೀಗಳ ಪೂರ್ವಾಶ್ರಮ ಹಿನ್ನಲೆ
ಶ್ರೀ ಆದಿಶಂಕರಾಚಾರ್ಯರ ಕಟ್ಟಾ ಅನುಯಾಯಿ ಆಗಿರುವ ಶ್ರೀಗಳು ಪೂರ್ವಾಶ್ರಮದಲ್ಲಿ ಕೇರಳದ ತೃಶೂರಿನ ಚಾಲಕ್ಕುಡಿಯ ಮೇನೋಕಿ ವೀಟ್ಟಿಲ್ ಸೇತುಮಾಧವನ್-ಆನಂದವಲ್ಲಿ ದಂಪತಿ ಪುತ್ರನಾಗಿದ್ದಾರೆ. ಪಿ. ಸಲೀಲ್ ಇವರ ಪೂರ್ವನಾಮ. ಇರಿಞಲ ಕುಡ ಕ್ರೈಸ್ಟ್ ಕಾಲೇಜು, ತೃಶೂರು ಕೇರಳ ವರ್ಮ ಕಾಲೇಜಿಗಳಲ್ಲಿ ಶಿಕ್ಷಣ ಪಡೆದ ಆವರು ಎಢಪಂಥೀಯ ವಿದ್ಯಾರ್ಥಿ ಸಂಘಟನೆಯಾದ ಎಸ್‌ಎಫ್‌ಐಯ ಪ್ರಮುಖ ನೇತಾರನಾಗಿದ್ದರು. ಎಸ್‌ಎಫ್‌ಐಯ ತ್ರಿಶೂರು ಜಿಲ್ಲಾ ಉಪಾಧ್ಯಕ್ಷ, ಕಾಲೇಜ್ ಯೂನಿಟ್ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದವರು. ಕಟ್ಟಾ ನಾಸ್ತಿಕರಾಗಿದ್ದ ಇವರು ಓರ್ವ ಪತ್ರಕರ್ತನಾಗಬೇಕೆಂಬ ಹಂಬಲ ದಿಂದ ಕೊಚ್ಚಿಯ ಮೀಡಿಯಾ ಅಕಾ ಡೆಮಿಯಲ್ಲಿ ಜರ್ನಲಿಸಂ ಪೂರ್ಣ ಗೊಳಿಸಿದ್ದರು. ಬಳಿಕ ಹತ್ತುವರ್ಷಗಳ ಕಾಲ ಪತ್ರಕರ್ತನಾಗಿ ದ್ದರು.
ಮಾರ್ಕ್ಸ್ನಿಂದ ಮಹರ್ಷಿಯತ್ತ….!
ಆಸ್ತಿಕತೆಯನ್ನು ವಿರೋಧಿಸಿ ದೈವ ದೇವರುಗಳೆನ್ನೋದು ಶುದ್ಧ ಮೂಢತನ ಎಂದು ಭಾಷಣ ಮಾಡುತ್ತಾ ಗುರುತಿಸಿಕೊಂಡಿದ್ದ ಪಿ. ಸಲೀಲ್ ಅವರ ಬದುಕಲ್ಲಿ ಉಂಟಾ ದ ಆಕಸ್ಮಿಕ ತಿರುವೊಂದು ಬದುಕಿನ ಚಿತ್ರಣವನ್ನೇ ಬದಲಿಸಿ ಬಿಟ್ಟಿತು.
ದೃಶ್ಯ ಮಾಧ್ಯಮದಲ್ಲಿ ದುಡಿಯುತ್ತಿದ್ದ ಅವರು ೨೦೧೯ರಲ್ಲಿ ಅಲಹಾಬಾದ್ ನಲ್ಲಿ ನಡೆದ ಕುಂಭಮೇಳವನ್ನು ನೇರ ಪ್ರಸಾರ ಮಾಡಲು ಹೋಗಿದ್ದರು. ಅಲ್ಲಿ ಅವರು ಭೇಟಿಯಾದ ನಾಗ ಸಾಧುರೋರ್ವರ ಪ್ರಭಾವಕ್ಕೆ ಒಳಗಾದ ಸಲೀಲ್ ಜೂನಾ ಪಂಥದ ನಾಗ ಸನ್ಯಾಸಿಯಿಂದ ನಾಗದೀಕ್ಷೆಯನ್ನು ಪಡೆದುಕೊಂಡರು. ಬಳಿಕ ಕಠಿಣ ತಪಸ್ಸಲ್ಲಿ ನಿರತರಾದ ಅವರು ಆನಂದವನ ಭಾರತೀ ಸ್ವಾಮೀಜಿಯಾಗಿ ಪರಿವರ್ತನೆ ಹೊಂದಿದ್ದರು. ಬಳಿಕ ಪ್ರಯಾಗ್ ರಾಜ್‌ನಲ್ಲಿ ನಡೆದ ಕುಂಭಮೇಳದಲ್ಲಿ ಶ್ರೀ ಮಹಂತ್ ಪ್ರೇಮಗಿರಿ ಅವರ ನೇತೃತ್ವದಲ್ಲಿ ಸಲೀಲ್‌ರನ್ನು ಮಹಾಮಂಡಲೇಶ್ವರರನ್ನಾಗಿ ಜೂನಾ ಪೀಠಾಧಿಪತಿ ಅವಧೋಶಾನಂದ ಗಿರಿ ಅಭಿಷೇಕ ಮಾಡಿದ್ದರು.

RELATED NEWS

You cannot copy contents of this page