ಕಾಸರಗೋಡು: ರಾಜ್ಯದ ಮಕ್ಕಳಲ್ಲಿ ಇತ್ತೀಚೆಗಿನಿಂದ ಹೃದ್ರೋಗ ಹೆಚ್ಚಾಗತೊಡಗಿದೆ. ರಾಜ್ಯ ಸರಕಾರದ ಉಚಿತ ಹೃದ್ರೋಗ ಚಿಕಿತ್ಸೆ ಯೋಜನೆಯಾದ ಹೃದ್ಯ ಎಂಬ ಯೋಜನೆಯಲ್ಲಿ ನೋಂದಾಯಿ ಸಲ್ಪಟ್ಟ ಲೆಕ್ಕಾಚಾರದಲ್ಲಿ ರಾಜ್ಯದಲ್ಲಿ ಪ್ರತೀ ವರ್ಷ ಜನಿಸುವ ಸರಾಸರಿ 3200 ಮಕ್ಕಳಲ್ಲಿ ಹೃದ್ರೋಗ ಕಾಣಿಸಿಕೊಳ್ಳುತ್ತಿದೆ. ಇದರಲ್ಲಿ 1100 ಮಕ್ಕಳು ಗಂಭೀರ ಹೃದ್ರೋಗ ಕಾಯಿಲೆಯಿಂದ ಬಳಲುತ್ತ್ತಿರುವವ ರಾಗಿದ್ದಾರೆ. ಇಂತಹ ಗಂಭೀರ ಸ್ಥಿತಿಯಲ್ಲಿ ಹೃದ್ಯ ಯೋಜನೆ ಪ್ರಕಾರ ಅಂತಹ ಮಕ್ಕಳಿಗೆ 24 ತಾಸುಗಳೊ ಳಗಾಗಿ ಚಿಕಿತ್ಸೆ ನೀಡಲಾಗುತ್ತಿದೆ.
ಹೃದ್ಯ ಯೋಜನೆಯಲ್ಲಿ ಕಳೆದ ಎಂಟು ವರ್ಷದಲ್ಲಿ ನವಜಾತ ಶಿಶುಗಳಿಂದ ಆರಂಭಗೊಂಡು 18 ವರ್ಷ ತನಕದ 25,875 ಮಂದಿ ಹೆಸರು ನೋಂದಾಯಿಸಿದ್ದಾರೆ. ಇದರಲ್ಲಿ 16,349 ಮಂದಿ ಒಂದು ವರ್ಷಕ್ಕಿಂತ ಕೆಳಪ್ರಾಯದ ಮಕ್ಕಳಾಗಿದ್ದಾರೆ. ಇವರಲ್ಲಿ ಪ್ರಸ್ತುತ ಯೋಜನೆ ಪ್ರಕಾರ 8478 ಮಕ್ಕಳನ್ನು ಶಸ್ತ್ರಕ್ರಿಯೆಗೊಳಪ ಡಿಸಲಿದೆ. ಇತರರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸರಕಾರಿ ಮತ್ತು ಖಾಸಗಿ ವಲಯದಲ್ಲಿ ಸೇರಿದಂತೆ ರಾಜ್ಯದಲ್ಲಿ ಒಟ್ಟು ಎಂಟು ಆಸ್ಪತ್ರೆಗಳಲ್ಲಿ ಹೃದ್ಯ ಯೋಜನೆ ಪ್ರಕಾರ ಚಿಕಿತ್ಸೆ ನೀಡಲಾಗತ್ತಿದೆ. ಇದಕ್ಕೆ ತಗಲುವ ವೆಚ್ಚದಲ್ಲಿ ಶೇ.೬೦ರಷ್ಟು ಕೇಂದ್ರ ಸರಕಾರ ಮತ್ತು ಶೇ.೪೦ರಷ್ಟು ರಾಜ್ಯ ಸರಕಾರ ನೀಡುತ್ತಿದೆ. 2017 ಅಗೋಸ್ತ್ನಲ್ಲಿ ಈ ಯೋಜನೆ ಯನ್ನು ಜ್ಯಾರಿಗೊಳಿ ಸಲಾಗಿತ್ತು. ಸರಕಾರಿ ಆಸ್ಪತ್ರೆಗಳಲ್ಲಿ ಜನಿಸುವ ಎಲ್ಲಾ ಮಕ್ಕಳನ್ನು ಇಂತಹ ಪರೀಕ್ಷೆಗೊಳ ಪಡಿಸಲಾಗುವುದು.







