ಉಪ್ಪಳ ಅಗ್ನಿಶಾಮಕ, ರಕ್ಷಣಾ ಕೇಂದ್ರದ ನೂತನ ಕಟ್ಟಡ ಉದ್ಘಾಟನೆ

ಉಪ್ಪಳ: ಮಂಗಲ್ಪಾಡಿ ಪಂಚಾಯತ್‌ನ ಸೋಂಕಾಲು ಪ್ರತಾಪನಗರದಲ್ಲಿ ನಿರ್ಮಿಸಲಾದ ಉಪ್ಪಳ ಅಗ್ನಿಶಾಮಕ ದಳ ಮತ್ತು ರಕ್ಷಣಾ ಕೇಂದ್ರದ ನೂತನ ಕಟ್ಟಡ ಉದ್ಘಾಟನೆ ನಿನ್ನೆ ಸಂಜೆ ನಡೆಯಿತು. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆಲ್‌ಲೈನ್ ಮೂಲಕ ಕಟ್ಟಡದ ಉದ್ಘಾಟನೆ ನೆರವೇರಿಸಿದರು. ಅಗ್ನಿಶಾಮಕ ಮತ್ತು ರಕ್ಷಣಾ ಸೇವೆಗಳ ಮಹಾ ನಿರ್ದೇಶಕ ನಿತಿನ್ ಅಗರ್‌ವಾಲ್ ಐಪಿಎಸ್ ಆನ್‌ಲೈನ್‌ನಲ್ಲಿ ಸ್ವಾಗತಿಸಿದರು. ಶಾಸಕ ಎ.ಕೆ.ಎಂ ಅಶ್ರಫ್ ಅಧ್ಯಕ್ಷತೆ ವಹಿಸಿ, ಕಟ್ಟಡದ ಶಿಲಾಫಲಕವನ್ನು ಅನಾವರಣಗೊಳಿಸಿ ಮಾತನಾಡಿ ದರು. ಮಂಜೇಶ್ವರ ಬ್ಲೋಕ್ ಪಂಚಾಯತ್ ಅಧ್ಯಕ್ಷ ಸೈಫುಲ್ಲ ತಂಙಳ್, ಮಂಗಲ್ಪಾಡಿ ಪಂಚಾಯತ್ ಅಧ್ಯಕ್ಷ ಗೋಲ್ಡನ್ ಅಬ್ದುಲ್ ರಹಿಮಾನ್, ಜಿಲ್ಲಾ ಪಂಚಾಯತ್ ಅಭಿವೃದ್ದಿ ಸ್ಥಾಯೀ ಸಮಿತಿ ಅಧ್ಯಕ್ಷೆ ಇರ್ಫಾನಾ ಇಕ್ಬಾಲ್, ಮಂಗಲ್ಪಾಡಿ ಪಂಚಾಯತ್ ಸದಸ್ಯರಾದ ವಸಂತ ಕುಮಾರ್ ಮಯ್ಯ, ರವೀಂದ್ರ ಶೆಟ್ಟಿ, ಹಮೀದ್ ಹಾಜಿ, ಜಿಲ್ಲಾ ಫಯರ್ ಆಫೀಸರ್ ಮೂಸಾ ವಡಕೇರಿ, ಅಗ್ನಿ ಶಾಮಕದಳ ಅಧಿಕಾರಿಗಳಾದ ಪವಿತ್ರನ್.ಪಿ.ವಿ, ಪ್ರಸೀದಾ, ಶಿಜು.ಇ, ವಿವಿಧ ರಾಜಕೀಯ ನೇತಾರರಾದ ಅಸೀಸ್ ಮರಿಕೆ, ವಿಜಯ ಕುಮಾರ್ ರೈ ಮಲ್ಲಂಗೈ, ಮೆಹಮೂದ್ ಕೈಕಂಬ, ಹಮೀದ್ ಕೊಸ್ಮೊಸ್ ಉಪಸ್ಥಿತರಿದ್ದರು. ಇಂಜಿನಿಯರ್ ರಾಜೇಶ್ ಕುಮಾರ್ ವರದಿ ಮಂಡಿಸಿದರು. ಉಪ್ಪಳ ಅಗ್ನಿಶಾಮಕ ದಳ ಸ್ಟೇಷನ್ ಆಫೀಸರ್ ಪ್ರಭಾಕರನ್ ವಂದಿಸಿದರು. ಊರವರು, ವಿವಿಧ ರಾಜಕೀಯ ನೇತಾರರು, ಸಾಮಾಜಿಕ ಕಾರ್ಯಕರ್ತರ ಸಹಿತ ನೂರಾರು ಮಂದಿ ಪಾಲ್ಗೊಂಡರು.

RELATED NEWS

You cannot copy contents of this page