ಸ್ವರ್ಗ: ನಿವೃತ್ತ ಪ್ರಧಾನ ಅಧ್ಯಾಪಿಕೆ ಸ್ವರ್ಗ ನಿವಾಸಿ ಶೀಲಾವತಿ (62) ನಿಧನ ಹೊಂದಿದರು. ಪಾಣಾಜೆ ಸರಕಾರಿ ಶಾಲೆಯ ಪ್ರಧಾನ ಅಧ್ಯಾಪಿಕೆಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಮೃತರು ಪತಿ ಅಚ್ಯುತ ಸ್ವರ್ಗ (ಕಾಂಗ್ರೆಸ್ ಕಾರ್ಯಕರ್ತ, ಮಕ್ಕಳಾದ ಶ್ರೀದೇವಿ, ಜಯಪದ್ಮ, ಉದಯರಾಜ್, ಪ್ರೇಮಲತ, ಅಳಿಯಂದಿರಾದ ನವೀನ್ ಕುಮಾರ್ ಬಾಡೂರು, ದಿಲೀನ್, ದಿವಾಕರ ಬಾಡೂರು, ಸೊಸೆ ಶ್ರೀದೇವಿ ಅಡ್ಯನಡ್ಕ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ನಿಧನಕ್ಕೆ ವಿನಯ ಯೂತ್ ಕ್ಲಬ್ ಬಾಡೂರು ಸಂತಾಪ ಸೂಚಿಸಿದೆ.






