ಸುಖೋಯ್ ಫೈಟರ್ ಜೆಟ್ ಪಥನ: ಇಬ್ಬರು ಪೈಲಟ್‌ಗಳ ದುರ್ಮರಣ  

ನವದೆಹಲಿ: ಅಸ್ಸಾಂನ ಕರ್ಬಿ ಆಂಗ್ಲಾಗ್ ಜಿಲ್ಲೆಯಲ್ಲಿ ಭಾರತೀಯ ವಾಯುಪಡೆದ ಸುಖೋಯ್  30  ಜೆಟ್ ವಿಮಾನ ಪಥನಗೊಂಡು ಅದರಲ್ಲಿದ್ದ ಇಬ್ಬರು ಪೈಲಟ್‌ಗಳು ಸಾವನ್ನಪ್ಪಿದ್ದಾರೆ. ನಿನ್ನೆ ಸಂಜೆ ಈ ಜೆಟ್ ವಿಮಾನ ಜೋಹರ್ಟ್‌ನಿಂದ ಟೇಕ್ ಆಫ್ ಆದ ಸ್ವಲ್ಪ ಸಮ ಯದ  ಬಳಿಕ ವಿಮಾನ ರಾಡರ್ ಸಂಪರ್ಕ ಕಳೆದುಕೊಂಡಿತ್ತು. ನಂತರ ಆ ಬಗ್ಗೆ ಶೋಧ ನಡೆಸಿದಾಗ ವಿಮಾನ ಸುಮಾರು 60 ಕಿ.ಮೀ. ದೂರದಲ್ಲಿರುವ ಅಂಗ್ಲಾಂಗ್‌ನಲ್ಲಿ ಪಥನಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅದರ ಪೈಲೆಟ್‌ಗಳಾದ ಸ್ಕ್ವಾಡನ್ ಲೀಡರ್ ಅನುಜ್ ಮತ್ತು ಫ್ಲೈಟ್ ಲೆಫ್ಟಿನೆಂಟ್ ಪೂರ್ವೇಶ್ ದುರಾಗ್ಕರ್ ಸಾವನ್ನಪ್ಪಿರುವುದಾಗಿ ಐಎಎಫ್ ಅಧಿಕಾರಿಗಳು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.

You cannot copy contents of this page