ಕುಂಬ್ಡಾಜೆ: ಗರ್ಭಾಶಯ ಕ್ಯಾನ್ಸರ್ ಪ್ರತಿರೋಧಕ್ಕಾಗಿ 14 ವರ್ಷ ಪೂರ್ತಿಗೊಳಿಸಿದ ಹೆಣ್ಮಕ್ಕಳಿಗೆ ಉಚಿತವಾಗಿ ಹ್ಯೂಮನ್ ಹ್ಯಾಪಿ ಲೋಮ ವೈರಸ್ (ಎಚ್ಪಿವಿ) ವ್ಯಾಕ್ಸಿನ್ ನೀಡುವ ಯೋಜನೆಗೆ ಕುಂಬ್ಡಾಜೆ ಪಂಚಾಯತ್ನಲ್ಲಿ ಚಾಲನೆ ನೀಡಲಾಯಿತು. ಪಂಚಾಯತ್ ವ್ಯಾಪ್ತಿಯ 14 ವರ್ಷ ಪೂರ್ತಿಗೊ ಳಿಸಿದ ಎಲ್ಲಾ ಹೆಣ್ಮಕ್ಕಳಿಗೂ ಎರಡು ತಿಂಗಳೊಳಗೆ ವ್ಯಾಕ್ಸಿನ್ ನೀಡಿ 100 ಶೇಕಡಾ ಸಾಧನೆ ಹೊಂದಲು ಪಂಚಾಯತ್ ಜನಪ್ರತಿನಿಧಿಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು. ಸ್ಥಾಯಿ ಸಮಿತಿ ಅಧ್ಯಕ್ಷೆ ಪ್ರಿಯಾಂಕ ಅಧ್ಯಕ್ಷತೆ ವಹಿಸಿದ್ದು, ಅಧ್ಯಕ್ಷೆ ಯಶೋಧ ಉದ್ಘಾಟಿಸಿದರು. ಉಪಾಧ್ಯಕ್ಷ ರವೀಂದ್ರ ರೈ ಗೋಸಾಡ, ಅಬೂಬಕ್ಕರ್, ನೂರುದ್ದೀನ್ ಪಿ. ಬೆಳಿಂಜ, ಸೌಭಾಗ್ಯಲಕ್ಷ್ಮಿ, ಬಬಿತಾ ರೇಷ್ಮ ಮಾತನಾ ಡಿದರು. ಡಾ| ಸಯ್ಯೀದ್ ಶುಹೈಬ್ ಕ್ಯಾನ್ಸರ್ ರೋಗದ ಬಗ್ಗೆ ತರಗತಿ ನಡೆಸಿದರು. ವಾರ್ಡ್ ಮಟ್ಟದ ಚಟು ವಟಿಕೆ ಯಶಸ್ವಿಗೊಳಿಸಲು ಎಚ್.ಐ. ಸುರೇಶ್ ಕುಮಾರ್, ಎಲ್ಎಚ್ಐ ಉಷಾ ಕರೆ ನೀಡಿದರು. ಅಬ್ದುಲ್ ರಹಿಮಾನ್ ವಂದಿಸಿದರು. ಜೆಎಚ್ಐ ಜಿಜು ಮಾರ್ಕೋಸ್ ಉಪಸ್ಥಿತರಿದ್ದರು.







