ಕಾಸರಗೋಡು: ಯುವತಿ ಹಾಗೂ ಮೂರು ವರ್ಷ ಪ್ರಾಯದ ಪುತ್ರ ನಾಪತ್ತೆಯಾಗಿರುವುದಾಗಿ ದೂರಲಾಗಿದೆ. ಈ ಬಗ್ಗೆ ಪತಿ ನೀಡಿದ ದೂರಿನಂತೆ ಕಾಸರಗೋಡು ನಗರಠಾಣೆ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ತಳಂಗರೆ ಸಿರಾಮಿಕ್ಸ್ ರಸ್ತೆ ಸಮೀಪದ ನಿಸಾಮುದ್ದೀನ್ರ ಪತ್ನಿ ಸಬಾನತ್(23) ಹಾಗೂ ಮೂರು ವರ್ಷ ಪ್ರಾಯದ ಪುತ್ರ ನಾಪತ್ತೆಯಾಗಿದ್ದಾರೆನ್ನಲಾಗಿದೆ. ನಿನ್ನೆ ಮಧ್ಯಾಹ್ನ 12 ಗಂಟೆ ಬಳಿಕ ಈ ಇಬ್ಬರು ನಾಪತ್ತೆಯಾಗಿರುವುದಾಗಿ ಪತಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ ರಾಜಪುರಂನಲ್ಲಿ ಅಂಗನವಾಡಿಗೆ ಹೋದ ಯುವತಿ ಹಾಗೂ ಮೂರು ವರ್ಷ ಪ್ರಾಯದ ಪುತ್ರ ನಾಪತ್ತೆಯಾದ ಬಗ್ಗೆ ಕೇಸು ದಾಖಲಿಸಲಾಗಿದೆ. ರಾಜಪುರಂ ಪೊಲೀಸ್ ಠಾಣೆ ವ್ಯಾಪ್ತಿಯ ಕೊಟ್ಟೋಡಿ ಚೀಮುಳ್ಳಡ್ಕದ ಸಿನೋಜ್ರ ಪತ್ನಿ ಆರ್. ರಜಿತ (33) ಹಾಗೂ ಮೂರು ವರ್ಷ ಪ್ರಾಯದ ಪುತ್ರ ನಾಪತ್ತೆಯಾಗಿದ್ದಾರೆ. ನಿನ್ನೆ ಬೆಳಿಗ್ಗೆ ಮನನನ್ನು ಕರೆದುಕೊಂಡು ಪೇರಡ್ಕ ಅಂಗನವಾಡಿಗೆ ರಜಿತ ತೆರಳಿದ್ದಳು. ಆದರೆ ಬಳಿಕ ಮರಳಿ ಬಾರದ ಹಿನ್ನೆಲೆಯಲ್ಲಿ ಸಂಬಂಧಿಕನಾದ ಕೆ. ಹರಿಕೃಷ್ಣನ್ ನೀಡಿದ ದೂರಿನಂತೆ ರಾಜಪುರಂ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.






