ಕಾಸರಗೋಡು: ನಿನ್ನೆ ರಾತ್ರಿ ಸುರಿದ ಬೇಸಿಗೆ ಮಳೆಯಿಂದ ಪೆರಿಯ ಬಜಾರ್ ರಾಷ್ಟ್ರೀಯ ಹೆದ್ದಾರಿ ಸರ್ವಿಸ್ ರಸ್ತೆಯಲ್ಲಿ ನೀರು ತುಂಬಿಕೊಂಡಿದೆ. ರಾತ್ರಿ ೧೦.೩೦ರ ವೇಳೆ ಸುರಿಯತೊಡಗಿದ ಮಳೆ ಸುಮಾರು ೧೫ ನಿಮಿಷಗಳ ಕಾಲ ಮುಂದುವರಿದಿದೆ. ಇದೇ ವೇಳೆ ಬೇಸಿಗೆ ಮಳೆಗೆ ರಸ್ತೆಯಲ್ಲಿ ನೀರು ತುಂಬಿಕೊಂಡರೆ ಮಳೆಗಾಲದಲ್ಲಿ ಏನಾಗಿರಲಿದೆಯೆಂಬ ಬಗ್ಗೆ ನಾಗರಿಕರು ಆತಂಕ ವ್ಯಕ್ತಪಡಿಸಿದ್ದಾರೆ. ಎರಡೂ ಭಾಗಗಳಿಂದ ಹರಿದು ಬರುವ ಮಳೆ ನೀರು ಪೆರಿಯ ಬಜಾರ್ ರಾಷ್ಟ್ರೀಯ ಹೆದ್ದಾರಿಯ ಕೆಳ ಸೇತುವೆ ಸಮೀಪ ತುಂಬಿಕೊಳ್ಳುತ್ತಿದೆ. ಇಲ್ಲಿಂದ ಮಳೆ ನೀರು ಹರಿದುಹೋ ಗಲು ಬೇರೆ ದಾರಿಯಿಲ್ಲದಿರುವು ದರಿಂದ ನೀರು ಕೆಳ ಸೇತುವೆ ಹಾಗೂ ಎರಡೂ ಭಾಗಗಳಲ್ಲಿ ಸರ್ವೀಸ್ ರಸ್ತೆಯಲ್ಲಿ ತುಂಬಿ ನಿಂತಿದೆ. ವಿಷಯ ತಿಳಿದು ಸ್ಥಳೀಯರ ತಲುಪಿ ನೀರು ಹರಿದುಹೋಗಲು ವ್ಯವಸ್ಥೆ ಏರ್ಪಡಿಸಿದರು. ಆದರೂ ಮಳೆ ನೀರು ಪೂರ್ಣವಾಗಿ ಹರಿಯದ ರಸ್ತೆಯಲ್ಲೇ ಕಟ್ಟಿ ನಿಂತಿದೆ. ಮಳೆಗಾಲದಲ್ಲಿ ಈ ಪ್ರದೇಶದಲ್ಲಿ ಭಾರೀ ನೀರು ತುಂಬಿಕೊಳ್ಳುವ ಸಾಧ್ಯತೆಯಿದೆಯೆಂದೂ ಆದ್ದರಿಂದ ಈ ಸಮಸ್ಯೆಗೆ ಪರಿಹಾರ ಕಾಣಬೇಕೆಂ ದು ನಾಗರಿಕರು ಒತ್ತಾಯಿಸಿದ್ದಾರೆ.







